SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ : ಜೋಗಪ್ಪನವರ ಕೊಟ್ರಬಸಪ್ಪನವರು (75) ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.
ದಾವಣಗೆರೆಯ ಹೊಂಡದ ರಸ್ತೆಯ ಜೋಗಪ್ಪನವರ ದಿ. ಕಾಡಪ್ಪನವರ ದ್ವೀತಿಯ ಸುಪುತ್ರ, ಹಾಗೂ ನಗರಸಭೆ ಮಾಜಿ ಸದಸ್ಯರು ಹಾಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಮತ್ತು ನಗರದ ಶ್ರೀ ಬೀರಲಿಂಗೇಶ್ವರ ಮೈದಾನ ಹೋರಾಟ ಸಮಿತಿ ಕಾರ್ಯದರ್ಶಿಯಾಗಿ ಜೆ ಕೆ ಕೊಟ್ರಬಸಪ್ಪ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ನಾಲ್ವರು ಸಹೋದರರು, ಸಹೋದರಿ, ಹಾಗೂ ಪತ್ನಿ, ಪುತ್ರ, ಇಬ್ಬರೂ ಪುತ್ರಿಯರು, ಜೋಗಪ್ಪನವರ ಕುಟುಂಬಸ್ಥರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಫೆಬ್ರವರಿ 25ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 12.30 ರವರೆಗೆ ದಾವಣಗೆರೆ ನಗರದ ಮೃತರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಇವರ ದೇಹವನ್ನು ಜೆಜೆಎಂ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.