SUDDIKSHANA KANNADA NEWS/ DAVANAGERE/ DATE:23-02-2024
ಭಾರತೀಯ ಷೇರುಪೇಟೆಯಲ್ಲಿ ಸೂಚ್ಯಂಕಗಳು ಮೇಲೆ ಹೋದಂತೆಲ್ಲ ಮಾರಾಟದ ಒತ್ತಡಕ್ಕೆ ಒಳಗಾಗಿ ಇಳಿಕೆ ಕಾಣುತ್ತಿದೆ. ಇಂದು ಮಾರುಕಟ್ಟೆ ಧನಾತ್ಮಕವಾಗಿ ಪ್ರಾರಂಭ ವಾದರೂ ಸಹಾ ಹೆಚ್ಚು ಸಮಯವಿರದೆ ಇಲಿಕೆಯತ್ತ ಮುಖ ಮಾಡಿತು. ಸರ್ಕಾರಿ ವಲಯದ ಬ್ಯಾಂಕುಗಳ ಷೇರುಗಳು, ಮಿಡ್ ಕ್ಯಾಪ್ ಹಾಗೂ ಐಟಿ ವಲಯದ ಷೇರುಗಳಲ್ಲಿ ಹೆಚ್ಚು ಮಾರಾಟಕ್ಕೆ ಒಳಗಾಯಿತು. ವಹಿವಾಟಿನ ಮಧ್ಯೆ ನಿಫ್ಟಿ ಸಾರ್ವಕಾಲಿಕ ಎತ್ತರ 22,297.50 ದಾಖಲಿಸಿತ್ತು. ಅಂತಿಮವಾಗಿ ಸೂಚ್ಯಂಕಗಳು ಅಲ್ಪ ಇಳಿಕೆ ಕಂಡು ನಕಾರಾತ್ಮಕವಾಗಿ ಮುಕ್ತಾಯಗೊಂಡಿದೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -4.75 (-0.02%)
ಅಂಕ ಇಳಿಕೆ ಕಂಡು 22,212.70 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -15.44 (-0.02%) ಅಂಕ ಇಳಿಕೆ ಕಂಡು 73,142.80 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ BAJAJFINSV, SBILIFE, HDFCLIFE, LTIM, DRREDDY ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ BPCL, HCLTECH, MARUTI, ASIANPAINT, ONGC ನಕಾರಾತ್ಮಕ ವಹಿವಾಟು ನಡೆಸಿದವು.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.1,276.09 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.176.68 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.94 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.