ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾರ್ಚ್ 3ರಿಂದ 6 ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ: ಯಾವುದೇ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳುವಂತೆ ಸೂಚನೆ

On: February 22, 2024 7:26 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-02-2024

ದಾವಣಗೆರೆ: ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮವು ಮಾರ್ಚ್ 3 ರಿಂದ 6 ರ ವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಯಾವುದೇ ಮಕ್ಕಳು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಅವರು ಪ್ರಸಕ್ತ ಸಾಲಿನ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೊಲಿಯೋ ನಿರ್ಮೂಲನೆಗೆ ಸಾರ್ವತ್ರಿಕ ಲಸಿಕಾಕರಣ ಬಹಳ ಪ್ರಮುಖವಾಗಿರುತ್ತದೆ ಎಂದರು.

ಮಾ.3 ರಂದು ಜಿಲ್ಲೆಯ ಎಲ್ಲಾ ಲಸಿಕಾ ಬೂತ್‍ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆಯಯನ್ನು ಹಾಕಲಾಗುವುದು. ಹಾಗೂ ಮಾ.4 ರಿಂದ 6 ರವರೆಗೆ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಬೂತ್‍ನಲ್ಲಿ ಬಿಟ್ಟುಹೋದ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹೆಚ್ಚು ಕೆಲಸ ನಿರ್ವಹಿಸಬೇಕೆಂದರು.

ಪೊಲಿಯೋ ಲಸಿಕೆ ಹಾಕಲು ನಗರ ಪ್ರದೇಶದಲ್ಲಿ 53764 ಹಾಗೂ ಗ್ರಾಮೀಣ ಭಾಗದಲ್ಲಿ 86372 ಮಕ್ಕಳು ಸೇರಿ 140136 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿದೆ. ಲಸಿಕೆಗಾಗಿ 1121 ಬೂತ್‍ಗಳು, 28 ಕಡೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, 16 ಮೊಬೈಲ್ ಬೂತ್‍ಗಳನ್ನು ಸಿದ್ದಪಡಿಸಲಾಗಿದ್ದು 2245 ಲಸಿಕಾ ಕಾರ್ಯಕರ್ತರು ಮತ್ತು 219 ಮೇಲ್ವಿಚಾರಕರನ್ನು ಇದಕ್ಕಾಗಿ ನೇಮಿಸಲಾಗಿದೆ, ತಾಯಂದಿರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ. ರೇಣುಕಾರಾಧ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ ಮತ್ತು ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment