SUDDIKSHANA KANNADA NEWS/ DAVANAGERE/ DATE:18-02-2024
ದಾವಣಗೆರೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿನೂತನ ಮಹಿಳಾ ಸಮಾಜದ ವತಿಯಿಂದ “ವಿನೂತನ ಸ್ತ್ರೀ ಸೂಪರ್ ಜೋಡಿಗಳು ” ಎಂಬ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿದೆ.
50 ವಷ೯ದ ಒಳಗಿನವರಿಗೆ ಹಾಗೂ 50 ವಷ೯ದ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಒಂದು ತಂಡದಲ್ಲಿ ಇಬ್ಬರು ಇರಬೇಕು.
ಸಮಾಜದ ಸದಸ್ಯರಿಗೆ ಶುಲ್ಕ ರೂ 150, ಸಾವ೯ಜನಿಕರಿಗೆ ಶುಲ್ಕ 200 ರೂಪಾಯಿ ಕೊಟ್ಟು ನೊಂದಣಿ ಮಾಡಿಸಿಕೊಳ್ಳಬೇಕು. ಮಾರ್ಚ್ 12 ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಸ್ಪರ್ಧೆಗಳು ಪ್ರಾರಂಭಗೊಳ್ಳಲಿದ್ದು, ವಿದ್ಯಾನಗರದ ವಿನಾಯಕ ಬಡಾವಣೆಯ ವಿನಾಯಕ ದೇವಸ್ಥಾನದ ಆವರಣದಲ್ಲಿ ಈ ಸ್ಪರ್ಧೆಗಳು ಜರುಗಲಿವೆ.
ಸ್ಪರ್ಧೆ ನಾಲ್ಕು ಹಂತದಲ್ಲಿರುತ್ತದೆ. ಬೆಂಕಿ ರಹಿತ ನ್ಯೂಟ್ರೀಷಿಯನ್ ಸಹಿತ ಆಹಾರ, ಕ್ಟಿಜ್(ಸಾಮಾನ್ಯ ಜ್ಞಾನ, ಸ್ಪೂಟ್ಸ್, ರಾಮಾಯಣ, ಮಹಾಭಾರತ, ಆಧ್ಯಾತ್ಮಿಕ, ಪರಿಸರ), ಒಂದು ನಿಮಿಷದ ಆಟ, ಜಾನಪದ ನೃತ್ಯ ಇರುತ್ತದೆ. ‘
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9663823664 , 9886177445 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾನಗರದ ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ
ತಿಳಿಸಿದ್ದಾರೆ.