• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 23, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಮನೆ ಬಾಗಿಲಿಗೆ ಇ-ಆಸ್ತಿ ಸೇವೆ, ಜನರ ಅಲೆದಾಡಿಸಬೇಡಿ, ಹಿಂದಿನ ದಾಖಲೆಗಳ ಸಡಿಲಿಕೆ: ಸದುಪಯೋಗಪಡಿಸಿಕೊಳ್ಳುವಂತೆ ಎಸ್. ಎಸ್. ಮಲ್ಲಿಕಾರ್ಜುನ್ ಸಲಹೆ

Editor by Editor
February 13, 2024
in ದಾವಣಗೆರೆ
0
ಮನೆ ಬಾಗಿಲಿಗೆ ಇ-ಆಸ್ತಿ ಸೇವೆ, ಜನರ ಅಲೆದಾಡಿಸಬೇಡಿ, ಹಿಂದಿನ ದಾಖಲೆಗಳ ಸಡಿಲಿಕೆ: ಸದುಪಯೋಗಪಡಿಸಿಕೊಳ್ಳುವಂತೆ ಎಸ್. ಎಸ್. ಮಲ್ಲಿಕಾರ್ಜುನ್ ಸಲಹೆ

SUDDIKSHANA KANNADA NEWS/ DAVANAGERE/ DATE:13-02-2024

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಾರ್ಚ್ ಅಂತ್ಯದವರೆಗೆ ಎಲ್ಲಾ ವಾರ್ಡ್‍ಗಳಲ್ಲಿನ ಆಸ್ತಿಗಳಿಗೆ ಇ-ಆಸ್ತಿ ಸೇವೆ ದಾಖಲೆ ನೀಡುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ನಗರದ ನಿಟ್ಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿಸುವ ಮಾಲಿಕರಿಗೆ ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ದಾಖಲೆ ಒದಗಿಸುವ
ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ 2012 ರಲ್ಲಿ ದಾವಣಗೆರೆ ನಗರದಲ್ಲಿ 45 ಸಾವಿರ ಜನರಿಗೆ ಆಶ್ರಯ ಯೋಜನೆಯಡಿ ಅವರು ವಾಸಿಸುವ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ. ಆ ಸಂದರ್ಭದಲ್ಲಿ ಯಾವುದೇ ಮನೆ ಸಂಖ್ಯೆ ಇರಲಿಲ್ಲ. ಅವರೆಲ್ಲರೂ ಖಾತೆ ಮಾಡಿಸಿಕೊಂಡಿದ್ದು ಎಲ್ಲ ಹಕ್ಕುಗಳನ್ನು ಹೊಂದಲು ಇ-ಆಸ್ತಿ ದಾಖಲೆ ಬಹಳ ಪ್ರಮುಖವಾಗಿರುತ್ತದೆ. ಆ ಸಂದರ್ಭದಲ್ಲಿ ವಾಸಿಸುತ್ತಿದ್ದ ಮನೆ ಮಾಲಿಕರಿಗೆ ಹಕ್ಕುಪತ್ರ ವಿತರಣೆಗೆ ಇನ್ನೂ ಕೆಲವು ಬಾಕಿ ಉಳಿದಿದೆ ಎಂದರು.

ಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಈ ಹಿಂದೆ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೆ ಪ್ರಾಯೋಗಿಕವಾದ ದಾಖಲೆಗಳನ್ನಷ್ಟೆ ಪರಿಗಣಿಸಿ ಜನರಿಗೆ ಅಲೆದಾಡಿಸದೆ ಇ-ಆಸ್ತಿ ಖಾತೆ ಮಾಡಿಕೊಡಲು ಸೂಚನೆ ನೀಡಿದರು.

ಜನರು ಆಸ್ತಿ ತೆರಿಗೆ ಕಟ್ಟಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಪಾಲಿಕೆಗೆ ಆದಾಯವು ಬರಲಿದ್ದು ನೀರಿನ ಶುಲ್ಕ ವಸೂಲಿಯಾಗುತ್ತದೆ. ವಲಯವಾರು ಪ್ರಗತಿ ವರದಿಯನ್ನು ಪ್ರತಿ ವಾರ ನೀಡಬೇಕೆಂದ ಸಚಿವರು ಅನುಮೋದಿಸಿದ ದಾಖಲೆ ಎಷ್ಟು, ತಿರಸ್ಕರಿಸಿದ ಆಸ್ತಿ ಎಷ್ಟು, ಇದಕ್ಕೆ ಕಾರಣವೇನು ಎಂಬ ವರದಿಯನ್ನು ಪ್ರತಿ ವಾರ ನೀಡಲು ತಿಳಿಸಿದರು.

ಪಾಲಿಕೆ ಹಣ ಅಭಿವೃದ್ದಿಗೆ ಬಳಸಿ:

ರೂ.250 ಲಕ್ಷಗಳಲ್ಲಿ 29, 32, 35, 36 ನೇ ವಾರ್ಡ್‍ಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳನ್ನು ಈಗಾಗಲೇ ಸರ್ಕಾರದ
ಅನುದಾನದಿಂದ ನಿರ್ಮಾಣ ಮಾಡಲಾಗಿದ್ದು ಪಾಲಿಕೆ ಅನುದಾನದಿಂದ ಮಾಡುವ ಪ್ರಮುಖ ರಸ್ತೆಗಳು ಬಾಕಿ ಉಳಿದಿಲ್ಲ. ಪಾಲಿಕೆಯ ಅನುದಾನದಲ್ಲಿ ವಾರ್ಡ್ ರಸ್ತೆ, ಗುಂಡಿಮುಚ್ಚುವ ಕಾಮಗಾರಿ, ಬ್ರಿಡ್ಜ್, ಚರಂಡಿ
ಕಾಮಗಾರಿ ತೆಗೆದುಕೊಳ್ಳಲು ತಿಳಿಸಿ ಪಾಲಿಕೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನ ಸರ್ಕಾರದಿಂದ ಬರಲಿದೆ. ಈಗಾಗಲೇ ಜಲಸಿರಿ ಕಾಮಗಾರಿ, ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲೀಕರಣ, ರೂ.25 ಕೋಟಿಯಲ್ಲಿ ವಿಸ್ತರಣೆಯಾದ ಬಡಾವಣೆಗಳಿಗೆ ಒಳಚರಂಡಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಜಿಲ್ಲೆ ಪ್ರಥಮ:

ಕಂದಾಯ ಇಲಾಖೆಯಡಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಅದೇ ರೀತಿ ಪಾಲಿಕೆಯಿಂದ ಎಲ್ಲಾ ನಾಗರಿಕರ ಸೇವೆಗಳನ್ನು ಆನ್‍ಲೈನ್ ಮಾಡುವ ನಿಟ್ಟಿನಲ್ಲಿ ಕಚೇರಿ ಗಣಕೀಕರಣವನ್ನು ಆದಷ್ಟು ಬೇಗ ಮಾಡಿ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಮಾತನಾಡಿ ಜನಸ್ನೇಹಿ ಆಡಳಿತ ನೀಡಲು ಸರ್ಕಾರ ಬದ್ದವಾಗಿದ್ದು ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ. ನನ್ನ ಆಸ್ತಿ, ನನ್ನ ದಾಖಲೆ, ನನ್ನ ಹಕ್ಕು ಘೋಷವಾಕ್ಯದಡಿ ಜಿಲ್ಲೆಯ
ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಆಸ್ತಿ ದಾಖಲೆ ನೀಡಲು ಫೆಬ್ರವರಿ 13 ರಿಂದ ಚಾಲನೆ ನೀಡಲಾಗಿದೆ ಎಂದರು.

ಇ-ಆಸ್ತಿ ದಾಖಲೆ ಪಡೆಯುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಇದರಿಂದ ಆಸ್ತಿ ಮಾಲಿಕರಿಗೆ ಶೇ 100 ರಷ್ಟು ಮಾಲಿಕತ್ವ ಸಿಗಲಿದೆ. ಇದರಿಂದ ಆಸ್ತಿ ಮಾರಾಟ, ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಪಡೆಯಲು ಅನುಕೂಲವಾಗುತ್ತದೆ. ನಿವೇಶನ ಹಕ್ಕುಪತ್ರ ಪಡೆದವರು ಸಹ ಇ-ಆಸ್ತಿ ಪಡೆದುಕೊಳ್ಳಬೇಕು. ಈ ಕಾಯಿದೆಯು 2021 ರಿಂದ ಜಾರಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1.75 ಲಕ್ಷ ಆಸ್ತಿಗಳಲ್ಲಿ ಇಲ್ಲಿಯವರೆಗೆ ಕೇವಲ 30 ಸಾವಿರ ಆಸ್ತಿಗೆ ಇ-ಆಸ್ತಿ ದಾಖಲೆಗಳನ್ನು ಪಡೆಯಲಾಗಿದೆ. ಇನ್ನೂ 1.45 ಲಕ್ಷ ಇ-ಸ್ವತ್ತುಗಳನ್ನು ವಿತರಣೆ ಮಾಡಬೇಕಾಗಿದೆ ಎಂದರು.

ತೆರಿಗೆ ಹಣಕಾಸು ಸಮಿತಿ ಅಧ್ಯಕ್ಷರಾದ ಉದಯಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಸವಿತ ಗಣೇಶ್, ನಾಗರತ್ನಮ್ಮ, ಜಯಮ್ಮಗೋಪಿನಾಥ್, ಚಮನ್‍ಸಾಬ್,
ಮಂಜುನಾಥ್, ನಾಗರಾಜ್, ನಗರ ಯೋಜನಾ ಅಧ್ಯಕ್ಷ ಲತೀಫ್, ಮುಖಂಡರಾದ ನಾಗಭೂಷಣ್, ಶೇಖರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ
ಮಾತನಾಡಿದರು.

Next Post
CONTROVERSY STORY: ಮುಖ್ಯಶಿಕ್ಷಕಿ ಮೇಲಿನ ದ್ವೇಷಕ್ಕೆ ಇಂಗ್ಲೀಷ್ ಟೀಚರ್ ಷಡ್ಯಂತ್ರ, ವಿದ್ಯಾರ್ಥಿನಿಯರಿಗೆ ಶೌಚ ಸ್ವಚ್ಛಗೊಳಿಸುವ ಶಿಕ್ಷೆ: ಕೆಟ್ಟದ್ದು ಮಾಡಲು ಹೋದ ಟೀಚರ್ ಗೆ ಮುಂದೇನಾಯ್ತು…?

CONTROVERSY STORY: ಮುಖ್ಯಶಿಕ್ಷಕಿ ಮೇಲಿನ ದ್ವೇಷಕ್ಕೆ ಇಂಗ್ಲೀಷ್ ಟೀಚರ್ ಷಡ್ಯಂತ್ರ, ವಿದ್ಯಾರ್ಥಿನಿಯರಿಗೆ ಶೌಚ ಸ್ವಚ್ಛಗೊಳಿಸುವ ಶಿಕ್ಷೆ: ಕೆಟ್ಟದ್ದು ಮಾಡಲು ಹೋದ ಟೀಚರ್ ಗೆ ಮುಂದೇನಾಯ್ತು...?

Leave a Reply Cancel reply

Your email address will not be published. Required fields are marked *

Recent Posts

  • “ಭಾರತ ಎಂದಿಗೂ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ”: ಪಾಕ್‌ಗೆ ಎಸ್. ಜೈಶಂಕರ್ ಸ್ಪಷ್ಟ ಸಂದೇಶ!
  • “ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೇಂದ್ರಿತ, ಬದಲಾವಣೆ ಅಗತ್ಯವಿದೆ”: ನ್ಯಾಯಮೂರ್ತಿ ಅಭಯ್ ಓಕಾ ಅಭಿಮತ!
  • ರಕ್ಷಿಸಿಕೊಳ್ಳುವ ಹಕ್ಕು ಇದೆ: ಭಯೋತ್ಪಾದನೆ ಸಂಹಾರ ವಿರುದ್ಧದ ಭಾರತದ ಯುದ್ಧಕ್ಕೆ ಜರ್ಮನಿ ಬೆಂಬಲ!
  • ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರವೇ ಕೀಮೋಥೆರಪಿ ಕೇಂದ್ರ: ಸಿಎಂ ಸಿದ್ದರಾಮಯ್ಯ ಘೋಷಣೆ!
  • ದೇಶದ ಮನಸ್ಥಿತಿ ಅರಿಯಲು “ಆಡಳಿತ” ಕುರಿತ ಮಹತ್ವದ ಸಮೀಕ್ಷೆ ಪ್ರಾರಂಭಕ್ಕೆ ಸಜ್ಜು!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In