SUDDIKSHANA KANNADA NEWS/ DAVANAGERE/ DATE:01-02-2024
ಕೇಂದ್ರ ಸರ್ಕಾರದ ಮಧ್ಯಂತರ ಆಯವ್ಯಯವನ್ನು ಇಂದು ಹಣಕಾಸು ಖಾತೆ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಈ ಬಜೆಟ್ ಹೂಡಿಕೆದಾರರಿಗೆ ಅಷ್ಟೇನೂ ಸಂತಸ ಮೂಡಿಸದ ಕಾರಣ ಷೇರುಪೇಟೆಯಲ್ಲಿ ಯಾವುದೇ ತರಹದ ಬದಲಾವಣೆ ಕಾಣಲಿಲ್ಲ. ವಹಿವಾಟಿನ ನಡುವೆ ಏರಿಳಿತ ಕಂಡ ಸೂಚ್ಯಂಕಗಳು ಅಂತಿಮವಾಗಿ ಅಲ್ಪ ಇಳಿಕೆ ಯೊಂದಿಗೆ ಮುಕ್ತಾಯಗೊಂಡಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -28.25 (-0.13%) ಅಂಕ ಇಳಿಕೆ ಕಂಡು 21,697.45 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -106.81 (-0.14%) ಅಂಕ ಇಳಿಕೆ ಕಂಡು 71,645.30 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿMARUTI,POWERGRID,CIPLA, SBILIFE, EICHERMOT ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ GRASIM, LT ,ULTRACEMCO,DRREDDY,JSWSTEEL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,879.58 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.872.49 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.97 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.