ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಂತಾರಾಷ್ಟ್ರೀಯ ಮಟ್ಟದ ಉಪನ್ಯಾಸ ಖ್ಯಾತಿಯ ಬಹ್ಮಾಕುಮಾರಿ ಶಿವಾನಿ ದಾವಣಗೆರೆಗೆ: ವಿಶೇಷ ಉಪನ್ಯಾಸ ನೀಡಲಿದ್ದಾರೆ ರಾಜಯೋಗಿನಿ

On: January 31, 2024 12:06 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE: 31-01-2024

ದಾವಣಗೆರೆ: ಸುಖ – ಶಾಂತಿಮಯ ಜೀವನಕ್ಕಾಗಿ ಸಕಾರಾತ್ಮಕ ಚಿಂತನೆ ಮಾಡುವ ಕಲೆ ಕುರಿತಂತೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ನೀಡುವಲ್ಲಿ ಹೆಸರಾಗಿರುವ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಾನಿ ಅವರು ಫೆಬ್ರವರಿ 1 ರ ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಬ್ರಹ್ಮಾಕುಮಾರಿ ಸಂಸ್ಥೆಯ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ರಿಂದ ರಾತ್ರಿ 8 ಗಂಟೆಯರವರೆಗೆ ಎಸ್.ಎಸ್. ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಏರ್ಪಾಡಾಗಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶಿವಾನಿ ಅವರು ನಡೆಸಿಕೊಡಲಿದ್ದಾರೆ ಎಂದರು.

ಅಂತರ ರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಶಾಖೆ ವತಿಯಿಂದ ಈ ಕಾರ್ಯಕ್ರಮ ಏರ್ಪಾಡಾಗಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಅವರ ಸಾನ್ನಿಧ್ಯ, ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಅಧ್ಯಕ್ಷತೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಶಾಸಕರುಗಳಾದ ಬಿ.ಪಿ. ಹರೀಶ್, ಕೆ.ಎಸ್. ಬಸವಂತಪ್ಪ, ಬಸವರಾಜ ಶಿವಗಂಗಾ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ. ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್, ಉಪ ವಿಭಾಗಾಧಿಕಾರಿ ಎನ್. ದುರ್ಗಾಶ್ರೀ, ತಹಶೀಲ್ದಾರ್ ಡಾ. ಅಶ್ವತ್ಥ್‌, ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ದಾವಣಗೆರೆ ವಿವಿ ಉಪ ಕುಲಪತಿ ಡಾ.ಬಿ.ಡಿ. ಕುಂಬಾರ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಗ್ರಾಸೀಂ ಇಂಡಸ್ಟ್ರೀಸ್ ಹಿರಿಯ ಅಧ್ಯಕ್ಷ ಅಜಯ್ ಗುಪ್ತ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಏಕಬೋಟೆ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

ಸಂಕ್ಷಿಪ್ತ ಪರಿಚಯ:

ಮೂಲತಃ ದೆಹಲಿಯವರಾದ ಶಿವಾನಿ ಅವರು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಪೂನಾದ ಭಾರತೀಯ ವಿದ್ಯಾಪೀಠದಲ್ಲಿ ಎರಡು ವರ್ಷ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ರಾಜಯೋಗದ ಅಧ್ಯಯನ ಮಾಡುತ್ತಿರುವ ಅವರೀಗ ರಾಜಯೋಗ ಶಿಕ್ಷಕರಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ನೀಡುತ್ತಿದ್ದಾರೆ.

ಅಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಕುರಿತಂತೆ ಕಳೆದ 16 ವರ್ಷಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸಭಾ ಕಾರ್ಯಕ್ರಮ ಮತ್ತು ದೂರದರ್ಶನಗಳಲ್ಲಿ ಉಪನ್ಯಾಸ ನೀಡುತ್ತಿದ್ದಾರೆ. ಅವೇಕ್‌ನಿಂಗ್, ಪೀಸ್ ಆಫ್ ಮೈಂಡ್, ಅಸ್ತಾ ಟಿವಿ, ಝೀ ಟಿವಿ ಸೇರಿದಂತೆ, ಇತರೆ ಟಿವಿಗಳಲ್ಲೂ ಶಿವಾನಿ ಅವರ ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರವಾಗುತ್ತಲೇ ಇವೆ.

ಒತ್ತಡದಲ್ಲಿರುವ ಅನೇಕರಿಗೆ ಸನ್ಮಾರ್ಗ ತೋರುವಂತಹ ವಿಶೇಷ ಉಪನ್ಯಾಸದ ಸೇವೆಯನ್ನು ಶಿವಾನಿ ಅವರು ಮಾಡುತ್ತಿದ್ದಾರೆ. ಅಮೆರಿಕ, ಆಫ್ರಿಕಾ, ಅರಬ್ ಮತ್ತು ಇತರೆ ರಾಷ್ಟ್ರಗಳಿಗೂ ಹೋಗಿ ತಮ್ಮ ಮಹೋನ್ನತ ಸೇವೆ ಸಲ್ಲಿಸುತ್ತಿದ್ದಾರೆ.

ಒತ್ತಡ ಮುಕ್ತ ಜೀವನ ಶೈಲಿ, ನಾಯಕತ್ವ ಕೌಶಲ್ಯಗಳು, ಭಾವನಾತ್ಮಕ ಬುದ್ದಿವಂತಿಕೆ, ಸಕಾರಾತ್ಮಕ ಚಿಂತನಾ ಕಲೆ, ಜೀವನ ಮತ್ತು ಜೀವಂತ ಮೌಲ್ಯಗಳು, ಆಂತರಿಕ ಶಕ್ತಿಗಳನ್ನು ಗುರುತಿಸುವುದು, ಸ್ವ-ನಿರ್ವಹಣೆ, ಸಂಬಂಧಗಳಲ್ಲಿ ಸಾಮರಸ್ಯ, ರಾಜಯೋಗದ ಪ್ರಾಯೋಗಿಕ ವಿಧಾನಗಳು ಇತ್ಯಾದಿ ವಿಷಯಗಳನ್ನು ತುಂಬಾ ಸರಳವಾಗಿ ಜನಮನಕ್ಕೆ ತಲುಪುವಂತೆ ಮತ್ತು ಸಕಾರಾತ್ಮಕ ಬದಲಾವಣೆ ತರುವಲ್ಲಿ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಮನವಿ : ಬ್ರಹ್ಮಾಕುಮಾರಿ ಶಿವಾನಿ ಅವರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಸುಖ – ಶಾಂತಿಮಯ ಜೀವನ ತಮ್ಮದಾಗಿಸಿಕೊಳ್ಳುವಂತೆ ಲೀಲಾಜಿ ಅವರು ಮನವಿ ಮಾಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment