SUDDIKSHANA KANNADA NEWS/ DAVANAGERE/ DATE:29-01-2024
ದಾವಣಗೆರೆ: ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ 5.86 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೋತಿ ಲೇ ಔಟ್ ನ ಜಿ. ಪಿ. ನಿಖಿತಾ ಹಣ ಕಳೆದುಕೊಂಡವರು. ಹೊಟೇಲ್ ನಲ್ಲಿ ಕೊಠಡಿಗಳನ್ನು ಬುಕ್ ಮಾಡಲು ಪ್ರಚಾರ ಮಾಡಿದರೆ ಕಮೀಷನ್ ನೀಡಲಾಗುವುದು ಎಂದು ಹೇಳಿ ವಂಚಿಸಲಾಗಿದೆ.

ಫೇಸ್ ಬುಕ್ ನಲ್ಲಿ ಜಾಹೀರಾತುವೊಂದರ ಲಿಂಕ್ ಕ್ಲಿಕ್ ಮಾಡಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ವಾಟ್ಸಪ್ ನಲ್ಲಿ ಕನೆಕ್ಟ್ ಆಗಿದ್ದಾನೆ. ಐಬಿಸ್ ಹೊಟೇಲ್ ಗಳ ಬಾಡಿಗೆ ಕೊಠಡಿಗಳ ಬಗ್ಗೆ ಹೂಡಿಕೆ ಮಾಡಿದರೆ ಪ್ರತಿದಿನ ಕಮೀಷನ್ ಬರುತ್ತದೆ ಎಂದು ಆಮಿಷ ತೋರಿದ್ದಾರೆ. ಮೋಸದ ಜಾಲಕ್ಕೆ ಬಿದ್ದ ನಿಖಿತಾ ಅವರು, ಹಣದ ಆಸೆಗೆ ಹಣ ಹಾಕಿದ್ದಾರೆ.
ಹಂತ ಹಂತವಾಗಿ ತನ್ನ ಖಾತೆಗೆ 5.86 ಲಕ್ಷ ರೂಪಾಯಿಯನ್ನು ಹಾಕಿಸಿಕೊಂಡ ಬಳಿಕ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವುದೇ ಹಣ ಬರದಿದ್ದಾಗ ನಿಖಿತಾ ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.