ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮನೆ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳ ಸೆರೆ: ಇಷ್ಟೊಂದು ದಿನ ತಲೆಮರೆಸಿಕೊಂಡಿದ್ದಾತ ಸಿಕ್ಕಿಬಿದ್ದಿದ್ದು ಹೇಗೆ…?

On: January 24, 2024 4:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-01-2024

ದಾವಣಗೆರೆ: ಮನೆಕಳ್ಳತನ ಪ್ರಕರಣ ಸಂಬಂಧ ಅಂತರ್‌ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

2022ರ ನವೆಂಬರ್ 3 ರಂದು ರಾತ್ರಿ ಜಗಳೂರು ಪಟ್ಟಣದ ವಾಸಿ ಮಂಜುನಾಥ ಅವರ ಮನೆಯಲ್ಲಿ 11,44,800 ರೂಪಾಯಿ ಮೌಲ್ಯದ ಚಿನ್ನಮತ್ತು ಬೆಳ್ಳಿ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಗಳೂರು ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಶ್ರೀನಿವಾಸರಾವ್ ನೇತೃತ್ವದಲ್ಲಿ ಪಿಎಸ್‌ಐ ಸಾಗರ್ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ನಾಗಭೂಷಣ, ಬಸವರಾಜ, ಹನುಮಂತಪ್ಪ ಕವಾಡಿರವರನ್ನು ಒಳಗೊಂಡ ತಂಡವು ಮೇಲ್ಕಂಡ ಪ್ರಕರಣದ ಪ್ರಮುಖ ಆರೋಪಿ ಮಂಜು ಎಂಬಾತನನ್ನು ಬಂಧಿಸಿ 2023ರ ಮಾರ್ಚ್ 16ರಂದು ಬಂಧಿಸಿ, ಈತನಿಂದ ಜಗಳೂರು ಠಾಣೆಗೆ ಸಂಬಂಧಿಸಿದ 1 ಪ್ರಕರಣ, ಚಿತ್ರದುರ್ಗನಗರದ ಬಡಾವಣೆ, ಕೋಟೆ ಪೊಲೀಸ್ ಠಾಣೆಯ 2 ಪ್ರಕರಣಗಳು ಹಾಗೂ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯ 1 ಪ್ರಕರಣವನ್ನು ಪತ್ತೆ ಮಾಡಿ, ಒಟ್ಟು 25,18,500 ರೂ ಮೌಲ್ಯದ 503.8 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣದ ಎರಡನೇ ಆರೋಪಿ ತಲೆಮರೆಸಿಕೊಂಡಿದ್ದ ಈತನನ್ನು ಪತ್ತೆ ಮಾಡಲು ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಸೂಚನೆ ಮೇರೆಗೆ ಎಎಸ್ಪಿ ವಿಜಯ್‌ಕುಮಾರ್. ಎಂ. ಸಂತೋಷ್. ಜಿ.ಮಂಜುನಾಥ್, ಡಿವೈಎಸ್ಪಿ ಬಿ. ಎಸ್. ಬಸವರಾಜರ ನೇತೃತ್ವದಲ್ಲಿ ಜಗಳೂರು ಠಾಣೆ ಪಿಐ ಎಂ.ಶ್ರೀನಿವಾಸರಾವ್, ಪಿಎಸ್‌ಐ ಸಾಗರ್ ಮತ್ತು ಸಿಬ್ಬಂದಿ ಒಳಗೊಂಡ ತಂಡವನ್ನು ರಚನೆಮಾಡಿ, ಪತ್ತೆ ಮಾಡಲು ಸೂಚನೆಗಳನ್ನು ನೀಡಿದ ಮೇರೆಗೆ ಎರಡನೇ ಆರೋಪಿ ಅಯ್ಯಪ್ಪ ಅಲಿಯಾಸ್ ಮುರುಗನ್ ಅಲಿಯಾಸ್ ದುರುಗೇಶ್ (41)

ಚನ್ನರಾಯಪಟ್ಟಣದ ಬಿಜೆಪಿ ಕುಮಾರಣ್ಣರ ತೋಟದ ಮನೆಯಲ್ಲಿನ ಗಾಯತ್ರಿ ಬಡಾವಣೆಯ ಮಹಾಲಕ್ಷ್ಮೀ ಸರ್ವೀಸ್ ಸ್ಟೇಷನ್ ಹತ್ತಿರ ಪಂಚರ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪನನ್ನು ಬಂಧಿಸಲಾಗಿದೆ.

ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ 4,74,600 ರೂ ಮೌಲ್ಯದ 6 ಕೆ.ಜಿ 328 ಗ್ರಾಂ ಬೆಳ್ಳಿ ಆಭರಣಗಳು, ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ 1,63,000 ರೂ ಬೆಲೆ ಬಾಳುವ 29.190 ಗ್ರಾಂ ಮಿಲಿ ತೂಕದ ಬಂಗಾರದ ನೆಕ್ಲೇಸ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment