SUDDIKSHANA KANNADA NEWS/ DAVANAGERE/DATE:23_08_2025
ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿ ನೀಡಿ ರಾಜ್ಯ ಸರ್ಕಾರವು ಆದೇಶಿಸಿದೆ.
ಈ ಸುದ್ದಿಯನ್ನೂ ಓದಿ: ಬೀದಿ ನಾಯಿಗಳಿಗೆ ಜನರು ಆಹಾರ ನೀಡುವಂತಿಲ್ಲ, ಲಸಿಕೆ ನೀಡಿ ಆಶ್ರಯ ತಾಣಗಳಿಗೆ ಬಿಡಿ: ಸುಪ್ರೀಂಕೋರ್ಟ್ ತೀರ್ಪು!
ದಂಡವನ್ನು ಪಾವತಿಸಲು ಶೇ 50% ರಷ್ಟು ರಿಯಾಯಿತಿ ಆದೇಶವು ಆಗಸ್ಟ್ 23ರಿಂದ ಅಕ್ಟೋಬರ್ 12ರವರೆಗೆ ಜಾರಿಯಲ್ಲಿರುತ್ತದೆ. ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ದಂಡವನ್ನು ಪಾವತಿಸುವ
ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಬಾಕಿ ಇರುವ ದಂಡದ ವಿವರ ನೋಡುವುದು, ಪಾವತಿಸುವ ವಿಧಾನ:
- ಕರ್ನಾಟಕ ಸ್ಟೇಟ್ ಪೊಲೀಸ್ ಆಪ್ ಮೂಲಕ ಪಾವತಿಸಬಹುದಾಗಿದೆ.
- ಆನ್ ಲೈನ್ ಸೇವಾ ಕೇಂದ್ರಗಳಾದ ದಾವಣಗೆರೆ ಒನ್, ಕರ್ನಾಟಕ ಒನ್ ಗಳಲ್ಲಿ ಪಾವತಿಸಬಹುದಾಗಿದೆ.
- ಹೆಡ್ ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಪಾವತಿಸಬಹುದಾಗಿದೆ.
- ದಕ್ಷಿಣ ಸಂಚಾರ ಪೊಲೀಸ್ ಠಾಣೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡ ಪಾವತಿಸಬಹುದಾಗಿದೆ
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.