SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ : ಶ್ರೀ ಶೈಲ ಎಜುಕೇಶನ್ ಟ್ರಸ್ಟ್ (ರಿ) ಜಿ.ಎಂ.ಎಸ್. ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನಲ್ಲಿ ಉದ್ಯೋಗ ಮತ್ತು ತರಬೇತಿ ಕೋಶದ ಅಡಿಯಲ್ಲಿ ಕೈಗೊಂಡ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಬಿಕಾಂ, ಬಿಸಿಎ, ಬಿಎಸ್ಸಿ ವಿಭಾಗಗಳು ಸೇರಿ ಒಟ್ಟಾರೆಯಾಗಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 220 ಉದ್ಯೋಗ ಅವಕಾಶಗಳನ್ನೂ, 51 ವೃತ್ತಿಪರ ತರಬೇತಿ ಅವಕಾಶಗಳನ್ನೂ ಒದಗಿಸಲಾಗಿದೆ.
ಬಿ.ಕಾಂ ವಿಭಾಗದಿಂದ ಒಟ್ಟು 122 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್, ಇನ್ಸೈಡ್ ಸೇಲ್ಸ್ ಇಂಟರ್ನ್ ಪದನಾಮರಾಗಿ ವಾರ್ಷಿಕ 4 ರಿಂದ 6ಲಕ್ಷ ವೇತನ ನಿಗದಿಯೊಂದಿಗೆ ಉದ್ಯೋಗ ಗಳಿಸಿಕೊಂಡಿದ್ದಾರೆ. ಅಲ್ಲದೆ ಸುಮಾರು 24 ವಿದ್ಯಾರ್ಥಿಗಳು ತರಬೇತಿ ಸಹಿತ ಉದ್ಯೋಗ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
ಬಿ.ಸಿ.ಎ. ವಿಭಾಗದಿಂದ ಒಟ್ಟು 80 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಉದ್ಯೋಗ ಪೂರ್ವ ತರಬೇತಿಯ ಜೊತೆ ಜೊತೆಗೆ ವಾರ್ಷಿಕ 4 ರಿಂದ 6 ಲಕ್ಷ ವೇತನ ನಿಗದಿಯೊಂದಿಗೆ ಉದ್ಯೊಗವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಸುಮಾರು 17 ವಿದ್ಯಾರ್ಥಿಗಳು ತರಬೇತಿ ಸಹಿತ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಬಿಎಸ್ಸಿ ವಿಭಾಗದಿಂದ 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ 4.86ಲಕ್ಷ ವೇತನಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಸುಮಾರು 10 ವಿದ್ಯಾರ್ಥಿಗಳು ತರಬೇತಿ ಸಹಿತ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (TCS), ಕ್ಯು ಸ್ಪೈಡರ್ (Q- Spider), ಟೀಚ್ ನೂಕ್ (Teech nook), ಸ್ಕಿಲ್ ಫೋರ್ಜ್ (Skill Forge), ಅಕಾಡೆಮೊರ್ (Academor), ಗ್ಲೋಲಾಜಿಕ್ಸ್ (Glowlogics), ಬೆಸೆಂಟ್ ಟೆಕ್ನೋಲಾಜೀಸ್ (Besant Technologies), ಸ್ಕಿಲ್ಯಕ್ಸ್ ಟೆಕ್ನೋಲಾಜೀಸ್ (Skyllx Technologies) ಮತ್ತು ಪ್ರೋ ಸ್ಪೈಡರ್ಸ್ (Pro- Spider) ಗಳು ಭಾಗವಹಿಸಿದ್ದವು.
ಪದವಿ ಪಡೆಯುವುದರ ಜೊತೆ ಜೊತೆಗೆ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಿ.ಎಂ.ಎಸ್. ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ವೇತಾ ಮರಿಗೌಡರ್, ಜಿಎಂ ವಿಶ್ವವಿದ್ಯಾಲಯದ CASP ನಿರ್ದೇಶಕರಾದ ಪ್ರೊ. ತೇಜಸ್ವೀ ಕಟ್ಟಿಮನಿ, ಕಾಲೇಜಿನ ಆಡಳಿತ ಮಂಡಳಿ, ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕರಾದ ಪ್ರಮೋದ್ ಬಿ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.