
ದುಬೈ: ನ್ಯೂಜಿಲೆಂಡ್ ವಿರುದ್ಧ ನಡೆದಲ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದೆ. ರೋಹಿತ್ ಬಳಗವು ಅಂತಿಮ ಕ್ಷಣದಲ್ಲಿ ನಾಲ್ಕು ವಿಕೆಟ್ ಗಳ ರೋಚಕ ಗೆಲುವು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಪಡೆ ನಿಗದಿತ 50 ಓವರ್ ಗಳಲ್ಲಿ 251ರನ್ ಪೇರಿಸಿತು. ಭಾರತಕ್ಕೆ 252 ರನ್ ಗಳ ಗುರಿ ನೀಡಿತು. ಮೊದಲ ವಿಕೆಟ್ ಕಿವೀಸ್ ಓಪನರ್ಸ್ ಉತ್ತಮ ಆರಂಭ ದೊರಕಿಸಿಕೊಟ್ಟರು. ಆ ನಂತರ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಸ್ಪಿನ್ ಬೌಲಿಂಗ್ ಗೆ ತತ್ತರಿಸಿದ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ವಿನ್ ಯಂಗ್ 5, ರಚಿನ್ ರವೀಂದ್ರ 37 ಉತ್ತಮ ಆರಂಭ ದೊರಕಿಸಿಕೊಟ್ಟರು.
ಕೇನ್ ವಿಲಿಯಮ್ಸ್ 11, ಡೇರಿಲ್ ಮಿಚೆಲ್ 63, ಟಾಮ್ ಲಾಥೆಮ್ 14, ಗ್ಲೆನ್ ಪಿಲಿಪ್ಸ್ 34, ಮೈಕ್ ಬ್ರೇಸ್ ವೆಲ್ 53 ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ಗೆ 251 ರನ್ ಪೇರಿಸಿ ಸವಾಲಿನ ಮೊತ್ತ ಪೇರಿಸಿತು.
252 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟಕ್ಕೆ ಶತಕ ಬಾರಿಸಿದರು. 18.4 ಓವರ್ ಗಳಲ್ಲಿ 104 ರನ್ ಗಳ ಜೊತೆಯಾಟ ನೀಡಿದರು. ಈ ವೇಳೆ ಶುಭಮನ್ ಗಿಲ್ 31 ರನ್ ಬಾರಿಸಿ ಕ್ಯಾಚ್ ನೀಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಡಕೌಟ್ ಆದರು. ಈ ವೇಳೆ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ನೀಡಿದರು. ಆದ್ರೆ, ರೋಹಿತ್ ಶರ್ಮಾ 76, ಶ್ರೇಯಸ್ ಅಯ್ಯರ್ 48, ಅಕ್ಷರ್ ಪಟೇಲ್ 29, ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ಕೆ. ಎಲ್. ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಉತ್ತಮ ಜೊತೆಯಾಟದ ನೆರವಿನಿಂದ ಗೆಲುವಿನ ನಗೆ ಬೀರಿತು.