SUDDIKSHANA KANNADA NEWS/ DAVANAGERE/ DATE:19-08-2023
ದಾವಣಗೆರೆ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ “ನನ್ನ ಮಣ್ಣು, ನನ್ನ ದೇಶ” ಅಭಿಯಾನದ ಮೂಲಕ ಸ್ಥಳೀಯ ದೇಶಿಯ ಮೂಲದ ಸಸಿ(Park)ಗಳನ್ನು ನೆಡಲಾಯಿತು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗುಂಡಿ ಮಹದೇವಪ್ಪ ಪಾರ್ಕ್(Park)ನಲ್ಲಿ “ಅಮೃತ ವಾಟಿಕಾ” ಸಸಿ ನೆಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ವಿನಾಯಕ ಬಿ. ಹೆಚ್., ಪಾಲಿಕೆಯ ಆಯುಕ್ತೆ ರೇಣುಕಾ, ಪಾಲಿಕೆ ಆಡಳಿತ ಪಕ್ಷದ ನಾಯಕ ಹಾಗೂ ಸದಸ್ಯ ಗಡಿಗುಡಾಳ್ ಮಂಜುನಾಥ್, ಪರಿಸರ ಜಗದೀಶ್, ಬಸವಣ್ಣ, ಅಜಯ್ ಪ್ರಕಾಶ್, ಪಾಲಿಕೆಯ ತೋಟಗಾರಿಕೆ ಸಿಬ್ಬಂದಿ ಹಾಜರಿದ್ದರು.
ಈ ಸುದ್ದಿಯನ್ನೂ ಓದಿ:
Siddaramaiah: ಎಸ್. ಎಸ್. ಮಲ್ಲಿಕಾರ್ಜುನ್ ಸೇರಿ ಜಿಲ್ಲೆಯ ಕಾಂಗ್ರೆಸ್ ನ ಆರು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಸೂಚನೆ, ಬೇರೆ ಏನೆಲ್ಲಾ ಚರ್ಚೆಯಾಯ್ತು..?
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.38 ಎಂ.ಸಿ.ಸಿ ಬಿ ಬ್ಲಾಕ್ ನ ಗುಂಡಿ ಸರ್ಕಲ್ ಪಾರ್ಕ್ ನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿಯಲ್ಲಿ ಐದು ವಿಶೇಷ ಗಿಡಗಳನ್ನು ನೆಡಲಾಯಿತು. ಫಿಲಿಶಿಯಂ ಡೆಸಿಪೆನ್ಸಿ, ಬೆಂಜಮಿನ್ ಫೈಕಸ್, ಬಾಟಲ್ ಬ್ರಶ್, ಲೆಜೆಸ್ಟ್ರೋಮಿಯ ತಬುಬಿಯ ರೋಸಿಯ ಜಾತಿಯ 100 ಸಸಿಗಳನ್ನು ನೆಡಲಾಯಿತು.
ಈ ವೇಳೆ ಮಾತನಾಡಿದ ಮೇಯರ್ ವಿನಾಯಕ್ ಪೈಲ್ವಾನ್ ಹಾಗೂ ಆಯುಕ್ತೆ ರೇಣುಕಾ ಅವರು ಇಂಥ ಅಪರೂಪದ ಸಸಿಗಳನ್ನು ನೆಡಲಾಗುತ್ತಿದೆ. ಇವುಗಳನ್ನು ಪೋಷಿಸಿ ಬೆಳೆಸಬೇಕು. ಈ ಗಿಡಗಳು ಜನರಿಗೆ ಉಪಯುಕ್ತವಾಗಿದ್ದು, ಜನರು ಸಹ ಹಾಳು ಮಾಡದೇ ಬೆಳೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನನ್ನ ಮಣ್ಣು, ನನ್ನ ದೇಶ ಎಂಬ ಅಭಿಯಾನ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಕೈಗೊಳ್ಳಲಾಗಿರುವ ಕಾರ್ಯಕ್ರಮ ಇದು. ಎಂಸಿಸಿ ಬಿ ಬ್ಲಾಕ್ ನಲ್ಲಿ ವಿಶೇಷ ರೀತಿಯಾದ ಐದು ಜಾತಿಯ ಗಿಡಗಳನ್ನು ನೆಡಲಾಗಿದೆ. ಇವುಗಳು ಬೆಳೆದಾಗ ಮಾತ್ರ ನಾವು ಮಾಡಿದ ಕೆಲಸಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.
ಗಡಿಗುಡಾಳ್ ಮಂಜುನಾಥ್ ಮಾತನಾಡಿ, ನನ್ನ ವಾರ್ಡ್ ನ ಪಾರ್ಕ್ ನಲ್ಲಿ ವಿಶೇಷವಾದ ಗಿಡಗಳನ್ನು ನೆಟ್ಟಿದ್ದು ಖುಷಿ ತಂದಿದೆ. ಪಾರ್ಕ್ ನಲ್ಲಿ ಈ ಗಿಡಗಳು ಬೆಳೆದ ಬಳಿಕ ಜನರಿಗೆ ನೋಡಲು ಖುಷಿ ಕೊಡುತ್ತವೆ. ಗಿಡಗಳನ್ನು ನೆಟ್ಟರೆ ಸಾಲದು ಪೋಷಿಸಿ ಬೆಳೆಸಬೇಕಿದೆ. ಜನರು ಸಹ ಈ ಗಿಡಗಳ ಎಲೆ ಕೀಳುವುದು, ಕಾಲಲ್ಲಿ ತುಳಿಯುವುದನ್ನು ಮಾಡಬಾರದು. ಈ ಗಿಡಗಳನ್ನು ಪೋಷಿಸಿ ಬೆಳೆಸುವಂತೆ ಪಾರ್ಕ್ ಉಸ್ತುವಾರಿ ನೋಡಿಕೊಳ್ಳುವವರಿಗೆ ಸೂಚನೆ ನೀಡಲಾಗುವುದು. ಈ ಗಿಡಗಳು ಪಾರ್ಕ್ ನ ಅಂದ ಮತ್ತಷ್ಟು ಹೆಚ್ಚಿಸಲಿವೆ ಎಂದು ತಿಳಿಸಿದರು.