ಬೆಳಗಾವಿ/ ದಾವಣಗೆರೆ: ಅಡಿಕೆ ಬೆಳೆಗೆ ಚುಕ್ಕೆ ಮತ್ತು ಇನ್ನಿತರ ರೋಗಗಳಿಂದ ಬೆಳೆಯ ಇಳುವರಿ ಕುಂಠಿತವಾಗಿರುವುದು ಗಮನಕ್ಕೆ ಬಂದಿದೆ, ಈಗಾಗಲೇ ರೋಗ ನಿವಾರಣೆಗೆ 50ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕ ಮತ್ತು ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು, ಬೆಳಗಾವಿಯ ಸುರ್ವಣಸೌಧದ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಪ್ರೆಶ್ನೆಗಳಿಗೆ ಉತ್ತರಿಸಿದರು.
ಬದಲಾದ ಹವಾಮಾನ ವೈಪರೀತ್ಯಗಳಿಂದ 53 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಗೆ ಚುಕ್ಕೆ ಹಾಗೂ ಇನ್ನಿತಿರ ರೋಗಗಳ ಭಾದೆ ಕಾಣಿಸಿಕೊಂಡಿದ್ದು ಗಮನಕ್ಕೆ ಬಂದಿದೆ, ಈಗಾಗಲೇ ಇದಕ್ಕೆ ಸಂಬಂಧ ಪಟ್ಟವರ ಜೊತೆ ಸೇರಿ ಹಲವಾರು ಸಭೆಗಳನ್ನು ನಡೆಸಿ, ರೋಗ ನಿವಾರಿಸಲು ಔಷಧಿಗಾಳನ್ನು ತಯಾರಿಸಲು ಸೂಚಿಸಿದೆ ಜೊತೆಗೆ ಶಿವಮೊಗ್ಗದ ವಿವಿಗೆ 50ಲಕ್ಷ ಅನುದಾನ ನೀಡಲಾಗಿದೆ ಎಂದರು.
ಶೇ.18 ರಷ್ಟು ಹವಾಮಾನ ವೈಪರೀತ್ಯದಿಂದ ಘಟ್ಟ ಪ್ರದೇಶದ ಕೆಳಭಾಗದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಎಲೆಗೆ ಚುಕ್ಕಿ ರೋಗ ಅವಾರಿಸಿದ್ದು, ಈಗ ಅಡಿಕೆ ಬೆಳೆಯುವ ಪ್ರದೇಶಕ್ಕೂ ಅವಾರಿಸಿಕೊಂಡಿದೆ, ಬೆಳೆ ರೋಗ ತಡೆ ಹಾಗೂ ಬೆಳೆ ರಕ್ಷಣೆಗೆ ಮತ್ತು ಸಬ್ಸಿಡಿಗೆ ಅತ್ಯಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ, ಅಡಿಕೆ ಬೆಳೆಗಾರರ ಹಿತರಕ್ಷಣೆ ಸರ್ಕಾರ ಸನ್ನದ್ಧವಾಗಿದೆ ಎಂದು ಶಾಸಕರ ಪ್ರೆಶ್ನೆಗಳಿಗೆ ತಿರುಗೇಟು ನೀಡಿದರು.