ವಡ್ನಾಳ್ ವಿರೂಪಾಕ್ಷಪ್ಪ ಬಂಧನವಾಗಲೇಬೇಕು. ಸಿದ್ದರಾಮಯ್ಯ ಈ ಮಾತು ಹೇಳುತ್ತಿದ್ದಂತೆ, ವಡ್ನಾಳ್ ಅಲ್ಲ, ಮಾಡಾಳ್ ಆಗಬೇಕು ಎಂದು ಸುತ್ತಮುತ್ತಲಿದ್ದವರು ಹೇಳಿದ ಪ್ರಸಂಗ ನಡೆಯಿತು.
ಚನ್ನಗಿರಿ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಯಡವಟ್ಟು ಮಾಡಿದ ಸಿದ್ದರಾಮಯ್ಯ, ಅವ್ನಾ ಊರ ಹೆಸರು ಅದಾ ಮಾಡಾಳ್. ಮಾಡಾಳ್ ಊರಿನವರಾ ವಿರೂಪಾಕ್ಷಪ್ಪ? ವಡ್ನಾಳ್ ಇವರದ್ದಾ? ಅದೊಂದು ಕಡೆ, ಇದೊಂದು ಕಡೆ, ಪೂರ್ವ, ಪಶ್ಚಿಮನಾ ಎಂದರು.
ರಾಜಣ್ಣ ಪ್ರಾಮಾಣಿಕ ವ್ಯಕ್ತಿ. ಜನಪರ ಕಾಳಜಿ ಇರುವ ಮನುಷ್ಯ. ವಡ್ನಾಳ್ ರಾಜಣ್ಣ ಶಾಸಕರಾಗಿದ್ದರು. ಆಗ ನಾನು ಮುಖ್ಯಮಂತ್ರಿ ಆಗಿದ್ದೆ. ವಡ್ನಾಳ್ ರಾಜಣ್ಣರ ಬಗ್ಗೆ ಅಪಾರ ಗೌರವವಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾತನಾಡ್ತಿದ್ದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದರು. ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಹೇಳಿದರು. ವಡ್ನಾಳ್ ರಾಜಣ್ಣರನ್ನು ಗೆಲ್ಲಿಸಿ ಎನ್ನುತ್ತಿದ್ದಂತೆ ವೇದಿಕೆಯ ಮೇಲಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮೊಗದಲ್ಲಿ
ಬೇಸರ ಕಂಡು ಬಂತು.