ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾ. 25ಕ್ಕೆ ವೇದಿಕೆ ಪೆಂಡಾಲ್ ನಲ್ಲಿ ತೆರೆದ ಜೀಪ್ ನಲ್ಲಿ ಮೋದಿ ವೇದಿಕೆಗೆ ಆಗಮನ..? DAVANAGERE MODI VISIT MARCH 25

On: March 23, 2023 10:51 AM
Follow Us:
---Advertisement---

SUDDIKSHANA KANNADA NEWS

DAVANAGERE

DATE:22_03_2023

ದಾವಣಗೆರೆ: ಬಿಜೆಪಿ (BJP)ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮಕ್ಕೆ ಜಿಎಂಐಟಿ (GMIT)ಯ 400 ಎಕರೆಯಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಮಾರ್ಚ್ 25ರ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (NARENDRA MODI)  ಅವರು ದಾವಣಗೆರೆಗೆ ಆಗಮಿಸಲಿದ್ದು, ಬೆಣ್ಣೆನಗರಿಯ ಕೇಸರಿಮಯವಾಗಿದೆ. ಮಹಾಸಂಗಮ (MAHASANGAMA) ನಡೆಯುವ ವೇದಿಕೆಯ ಪೆಂಡಾಲ್ ನಲ್ಲಿ ತೆರೆದ ಜೀಪ್ ನಲ್ಲಿ ಮೋದಿ (MODI) ಅವರು ಜನರ (PEOPLE) ಮಧ್ಯೆಯಿಂದಲೇ ವೇದಿಕೆಗೆ ಆಗಮಿಸುವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು ಎನ್ ಎಸ್ ಜಿ ಒಪ್ಪಿಗೆಗೆ ಕಾಯಲಾಗುತ್ತಿದೆ.

ಈ ಮಹಾಸಂಗಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹತ್ತು (TEN) ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ (SEAT)ಗೆಲ್ಲಲು ಇಲ್ಲಿಂದಲೇ
ವಿಜಯಯಾತ್ರೆಗೆ ಚಾಲನೆ ಸಿಗಲಿದೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ (G. M. SIDDESHARA) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕು ಜಿಲ್ಲೆಗಳಲ್ಲಿ ಮಾ. 1 ರಿಂದ ಬಿಜೆಪಿ (BJP) ವಿಜಯ ಸಂಕಲ್ಪ ಆರಂಭಗೊಂಡಿದ್ದು, ಮಾ. 24ಕ್ಕೆ ದಾವಣಗೆರೆಯಲ್ಲಿ ಸಮಾಪ್ತಿಗೊಳ್ಳಲಿದೆ. ಈಗಾಗಲೇ ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿಮಯ ಮಾಡಿ ಮೋದಿ ಫ್ಲೆಕ್ಸ್ (FLEX), ಬ್ಯಾನರ್, ಬಿಜೆಪಿ (BJP)ಬಾವುಟ, ಕೇಸರಿ ಧ್ವಜಗಳು ರಾರಾಜಿಸುವಂತೆ ಮಾಡಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ವಿಜೃಂಭಣೆಯಿಂದ ಎಂದೂ ಆಗಿರಲಿಲ್ಲ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಗದಗ ಸೇರಿದಂತೆ ಏಳು ಜಿಲ್ಲೆಗಳನ್ನಪ್ರಮುಖವಾಗಿ ಉದ್ದೇಶವಾಗಿಟ್ಟುಕೊಂಡು ಈ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯೊಂದರಿಂದಲೇ 3 ಲಕ್ಷ ಜನ ಬರುತ್ತಾರೆ. ಎಲ್ಲಾ ಶಾಸಕರಿಗೂ ಈ ಜವಾಬ್ದಾರಿ ನೀಡಲಾಗಿದೆ. ಸಮಾರಂಭದಲ್ಲಿ ಬಿಜೆಪಿ (BJP)ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ಕೆಲ ಸಚಿವರು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ರಾಜ್ಯದ ಸಂಘಟನೆಯ ಮುಖಂಡರು, ಕೋರ್ ಕಮಿಟಿ ಸದಸ್ಯರು ಆಗಮಿಸಲಿದ್ದಾರೆ ಎಂದರು.

ಮೋದಿ (MODI) ಅವರ ಆಗಮನ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರಿಂದ 12.30ರೊಳಗೆ ಕಾರ್ಯಕರ್ತರು ಖುರ್ಚಿಯಲ್ಲಿ ಆಸೀನರಾಗಬೇಕು. ನೂಕು ನುಗ್ಗಲು ಆಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಮೋದಿ ಅವರನ್ನು ಹತ್ತಿರದಿಂದ
ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾಸಂಗಮದ ಮೂಲಕ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ಪಕ್ಷವು ಮಿಷನ್ 150 ಹೊಂದಿದೆ. ನಾಲ್ಕು ಕಡೆಗಳಲ್ಲಿ ಚಾಲನೆಗೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು 5600 ಕಿಲೋಮೀಟರ್ ಸಂಚರಿಸಿದೆ.
ಅದ್ಭುತ ರೋಡ್ ಶೋಗಳು ನಡೆದಿವೆ. ಸಂಜೆ ನಡೆಯುತ್ತಿದ್ದ ಪ್ರತಿ ರ್ಯಾಲಿಗೂ 25 ರಿಂದ 30 ಸಾವಿರ ಜನರು ಸೇರುವ ಮೂಲಕ ಬಿಜೆಪಿ ಪರ ಅಲೆ ಇದೆ ಎಂಬುದು ಋಜುವಾತಾಗಿದೆ.132 ಕಡೆಗಳಲ್ಲಿ ರೋಡ್ ಶೋ ನಡೆಸಲಾಗಿದೆ ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment