ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೈಗೆ ಏನಾಯ್ತು ?

On: May 17, 2024 1:01 PM
Follow Us:
---Advertisement---

ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವಯಾ ರೈ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ನಟಿ ಐಶ್ವಯಾ ರೈ ಅವರ ಕೈಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಾರೆ. ವಿಶ್ವಪ್ರಸಿದ್ಧ ಕ್ಯಾನೆಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯು ಮೇ 14ರಂದು ಶುರುವಾಗಿದೆ. ಹೀಗಾಗಿ ಈ ಮಧ್ಯೆ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಈ ಕ್ಯಾನೆಸ್ ಈವೆಂಟ್​ಗೆ ಫ್ಯಾಷನ್ ಮತ್ತು ಸಿನಿಮಾ ರಂಗದ ಹಲವಾರು ತಾರೆಯರು ಬರುತ್ತಾರೆ. ಇನ್ನು ಸ್ಟಾರ್​ ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದನ್ನು ನೋಡಲು ಜನರು ಕಿಕ್ಕಿರಿದು ಕಾಯುತ್ತಿರುತ್ತಾರೆ. ಇನ್ನು, ಕಳೆದ ವರ್ಷಗಳಂತೆ ಈ ಬಾರಿಯೂ ನಟಿ ಐಶ್ವರ್ಯಾ ರೈ ಬಚ್ಚನ್ ಈ ಗ್ರ್ಯಾಂಡ್​ ಈವೆಂಟ್​ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಆದರೆ ಇದರ ಮಧ್ಯೆ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನು ನೋಡಿ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ಫ್ರೆಂಚ್ ರಿವೇರಿಯಾದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕಾಗಿ ತೆರಳಲು ಸಜ್ಜಾಗಿದ್ದ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೇ ವಿಡಿಯೋದಲ್ಲಿ ನಟಿ ಐಶ್ವರ್ಯ ಕೈಗೆ ಪೆಟ್ಟಾಗಿರುವುದು ಕಂಡು ಬಂದಿದೆ.

Join WhatsApp

Join Now

Join Telegram

Join Now

Leave a Comment