ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ರೂ.16.65 ಲಕ್ಷ ಗೃಹಬಳಕೆ ವಸ್ತುಗಳ ವಶ RAID

On: March 20, 2023 12:36 PM
Follow Us:
---Advertisement---

SUDDIKSHANA KANNADA NEWS

 

DAVANAGERE

 

ದಾವಣಗೆರೆ: ದಾವಣಗೆರೆ ದಕ್ಷಿಣ ವಿಭಾಗದ 107 ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನುಮಾಡಿದ್ದ ರೂ.16,65,630ಗಳ ಮೌಲ್ಯದ ಗೃಹಬಳಕೆ ವಸ್ತುಗಳನ್ನು ವಶಪಡಿಸಿಕೊಂಡು
ಮೊಕದ್ದಮೆ ದಾಖಲಿಸಲಾಗಿದೆ.

ಮಾರ್ಚ್ 19ರ ಸಂಜೆ ದಾವಣಗೆರೆ ಶಹರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ನಾಲಾಬಂದ್ ರಸ್ತೆಯಲ್ಲಿನ ಮಾಲತೇಶ ಜಾಧವ್ ಎಂಬುವವರಿಗೆ ಸೇರಿದ ಶೆಡ್‍ನಲ್ಲಿ ಅಂದಾಜು ಮೌಲ್ಯ ರೂ.16,65,630 ಮೌಲ್ಯದ
ನಿರ್ಲಾನ್ ಗೆಲಾಕ್ಸಿ 353 ರಟ್ಟಿನ ಬಾಕ್ಸ್ ಹಾಗೂ ಕೊಂಬೊ ಪ್ಯಾಕ್ 244 ರಟ್ಟಿನ ಬಾಕ್ಸ್ ಸೇರಿ 597 ರಟ್ಟಿನ ಬಾಕ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರತಿ ರಟ್ಟಿನ ಬಾಕ್ಸ್‍ನ ಮೇಲೆ 2790 ರೂ ಎಂದು ನಮೂದಿಸಲಾಗಿದ್ದು, ಎಲ್ಲ ಬಾಕ್ಸ್ ಗಳ ಮೇಲೆ ಎಸ್.ಎಸ್.& ಎಸ್.ಎಸ್.ಎಂ. ಅಭಿಮಾನ ಬಳಗ, ಹಸ್ತದ ಗುರುತು ಇರುವ ಹಾಗೂ ಹಾಲಿ ಶಾಸಕರಾದ ಶ್ಯಾಮನೂರು
ಶಿವಶಂಕರಪ್ಪ ಹಾಗೂ ಮಾಜಿ ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನಪ್ಪ ಅವರ ಭಾವಚಿತ್ರ ಅಚಿಟಿಸಿರುವುದು ಕಂಡುಬಂದಿದೆ.

ಪತ್ತೆಯಾದ ಬಾಕ್ಸ್‍ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್‍ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಪ್ರೈಫ್ಯಾನ್, ಕ್ಯಾರೋಲ್, ವುಡ್ ಸ್ಟಿಕ್‍ಗಳು ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ
ಅನುಮಾನ ವ್ಯಕ್ತವಾಗಿದ್ದು, ದಾಸ್ತಾನುಮಾಡಿದ ಶೆಡ್ಡಿನ ಮಾಲೀಕ ಮಾಲತೇಶ ಜಾಧವ್ ಎಂಬುವರು ಸ್ಥಳಕ್ಕೆ ಬಂದು ಸಹಕರಿಸಿದ ಕಾರಣ ದಾಸ್ತಾನು ಮಾಡಿದ ಶೆಡ್‍ನ್ನು ಸೀಲ್‍ಮಾಡಿ ಮಾಲೀಕನ ವಿರುದ್ಧ
ಕಲಂ 171(ಇ) ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ ದಕ್ಷಿಣ ವಿಭಾಗದ ಮತಕ್ಷೇತ್ರದ (107) ಸಹಾಯಕ ಚುನಾವಣಾಧಿಕಾರಿ ಬಿ.ಎಂ.ಮಾನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನೀಲ್ ಕುಮಾರ,
ಶಿವಾನಂದ ಡಿ. ಹಾಗೂ ಪೊಲೀಸ್‍ರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment