ಪುನೀತ್ ಅಜರಾಮರ, ಬಾರದ ಲೋಕಕ್ಕೆ ಹೋಗಿ ಎರಡು ವರ್ಷವಾದರೂ ರಾಜಕುಮಾರನ ಮಾಸದ ನೆನಪು
SUDDIKSHANA KANNADA NEWS
DATE: 17-03-2023
BANGALORE: ಪವರ್ ಸ್ಟಾರ್, (POWER STAR) ಕರುನಾಡಿನ ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅವರ ಜನುಮದಿನದ ಸಂಭ್ರಮ. ರಾಜ್ಯ ಕಂಡ ಅದ್ಭುತ ನಟ (ACTOR). ನಟನೆ, ತನ್ನ ಸಿಂಪಲ್ ನಡೆಯಿಂದಲೇ ಎಲ್ಲರ ಪ್ರೀತಿ (LOVE) ಸಂಪಾದಿಸಿದ್ದ ರಾಜಕುಮಾರ ಅಗಲಿದ ಕಹಿ ನೆನಪು ಇನ್ನು ಮಾಸಿಲ್ಲ. ಆದ್ರೂ ಅಭಿಮಾನಿಗಳು ಪವರ್ ಸ್ಟಾರ್ ಜನುಮದಿನ ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಿ ಸೇರಿದಂತೆ ಎಲ್ಲಾ ಭಾಷೆಗಳ ನಟರು ಇಂದಿಗೂ ಅಪ್ಪು ಮರೆತಿಲ್ಲ. ಮರೆಯೋದಿಲ್ಲ. ಅಷ್ಟು ಸುಂದರ ನಗು.
ಕನ್ನಡದ ಸೂಪರ್ ಸ್ಟಾರ್ (SUPER STAR), ಅವರ ಅಭಿಮಾನಿಗಳಿಗೆ ದೇವರು, ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದರೆ ಇಂದಿಗೆ 48 ವರ್ಷ ಆಗುತಿತ್ತು. 46 ವರ್ಷಕ್ಕೆ ಎಲ್ಲರನ್ನೂ ಬಿಟ್ಟು ಹೋದರು. ಕರುನಾಡು ಕಣ್ಣೀರಲ್ಲಿ ಮುಳುಗಿತ್ತು. ಅವರ ಸಾವು ಸಹ ಇತಿಹಾಸ (HISTORY) ಸೃಷ್ಟಿಸಿತ್ತು. ಪುನೀತ್ ರಾಜಕುಮಾರ್ ಇಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲವೆಂಬಂತೆ ಅಭಿಮಾನಿಗಳ ಜೈಕಾರ, ಹೂಂಕಾರ ಈಗಲೂ ಕೇಳಿ ಬರುತ್ತಿದೆ.
ಅಪ್ಪು ಸಮಾಧಿಗೆ ಪೂಜೆ:
ತುಂಬಾ ವಿಶೇಷವಾದ ವ್ಯಕ್ತಿ ಎಂದರೆ ಅದು ಪುನೀತ್ ರಾಜಕುಮಾರ್. (PUNEETH RAJKUMAR) ವರನಟ ಡಾ. ರಾಜಕುಮಾರ್ (RAJKUMAR) ಪುತ್ರ ಎಂಬ ಅಹಂಕಾರ ಇರಲಿಲ್ಲ. ಒಳ್ಳೆಯ ಚಿತ್ರಗಳನ್ನು ನೀಡುವ ಮೂಲಕ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ ಅಪ್ಪು ಹುಟ್ಟುಹಬ್ಬವನ್ನು ನೋವಿನಲ್ಲಿಯೇ ಅಭಿಮಾನಿಗಳು (FANS) ಆಚರಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಸ್ಫೂರ್ತಿಯ ಚಿಲುಮೆ ಆಗಿದ್ದ ಪುನೀತ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ತಂದಿದೆ. ಅವರ ಜೀವಿತಾವಧಿಯಲ್ಲಿ ಪುನೀತ್ ರಾಜಕುಮಾರ್ ನಟಿಸಿದ್ದು ಕೇವಲ 32 ಚಿತ್ರಗಳಲ್ಲಿ (CINEMAS) . ಮಗುವಿನ
ಜೊತೆ ಮಗುವಾಗಿ, ವಯಸ್ಕರ ಜೊತೆ ಮಗುವಾಗಿ ನಡೆದುಕೊಳ್ಳುತ್ತಿದ್ದ ಪುನೀತ್ ರಾಜಕುಮಾರ್ ರ ಸೌಮ್ಯ ಸ್ವಭಾವ ಅಜರಾಮರ.
ಕರುನಾಡಿನ ಕೂಗು ಮತ್ತೆ ಹುಟ್ಟಿ ಬಾ ಅಪ್ಪು:
ಪ್ರತಿ ಚಿತ್ರವು ತನ್ನ ಅಭಿಮಾನಿಗಳಿಗೆ ಹೊಸತನದಿಂದ ಕೂಡಿರುತಿತ್ತು. ಸಂದೇಶ ಇರುತಿತ್ತು. ಕುಟುಂಬದವರು ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದಾಗಿತ್ತು. ತಮಿಳು ಸ್ಟಾರ್ (THAMILU STAR) ವಿಶಾಲ್ ಕೃಷ್ಣ ಕನ್ನಡದ ತಾರೆಯನ್ನು ನೆನಪಿಸಿಕೊಂಡರೆ ಈಗಲೂ ಭಾವುಕರಾಗುತ್ತಾರೆ.
ಮರೆಯಲು ಆಗುತ್ತಿಲ್ಲ:
“ನಾನು ಮತ್ತು ಪುನೀತ್ ಒಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಅಂದಿನಿಂದ ನಾವು ತುಂಬಾ ಆತ್ಮೀಯ ಗೆಳೆಯರಾಗಿ ಉಳಿದೆವು. ಅವರ ಸಾವು ಎಲ್ಲರಿಗೂ ಆಘಾತ ತಂದಿದೆ. ಇದುವರೆಗೂ ಅದರಿಂದ ಹೊರ ಬರಲಾಗಿಲ್ಲ. ಅವರು ತೆರೆಯ ಮೇಲೆ ಸೂಪರ್ ಸ್ಟಾರ್ (SUPER STAR).
ನಿಜ ಜೀವನದಲ್ಲಿಯೂ ದೊಡ್ಡ ಸ್ಟಾರ್ (STAR) ಆಗಿದ್ದರು. ಅವರು ನೂರಾರು ಮನೆಗಳನ್ನು ನೋಡಿಕೊಂಡರು, ಹಲವಾರು ಶಸ್ತ್ರಚಿಕಿತ್ಸೆಗಳು ಮತ್ತು ಮಕ್ಕಳ ಶಿಕ್ಷಣಕ್ಕೆ ಹಣವನ್ನು ನೀಡಿದರು. ಅವರು ಪ್ರಾಯೋಜಿಸಿದ 1800 ವಿದ್ಯಾರ್ಥಿಗಳ ಬಗ್ಗೆ ನನಗೆ ತಿಳಿದಾಗ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.
ಕರುನಾಡಿನ ರಾಜಕುಮಾರ:
ಆರ್ ಆರ್ ಆರ್‌ನ ಸೂಪರ್‌ಸ್ಟಾರ್, ಜ್ಯೂನಿಯರ್ ಎನ್ ಟಿ ಆರ್ ಜೊತೆಗೆ ಕ್ಲೋಸ್ ಆಗಿದ್ದ ಪುನೀತ್ ರಾಜಕುಮಾರ್ ಅವರಿಗಾಗಿ ಗೆಳೆಯ ಗೆಳೆಯ ಹಾಡು ಹಾಡಿದ್ದರು. ಎನ್‌ಟಿಆರ್ ಜೂನಿಯರ್ ಅವರಂತೂ ಈಗಲೂ ಪುನೀತ್ ರಾಜಕುಮಾರ್
ಗುಣಗಾನ ಮಾಡುತ್ತಾರೆ.
“ಅಹಂಕಾರವಿಲ್ಲದೆ ಯುದ್ಧ ಮಾಡದೆ ಕೇವಲ ತನ್ನ ನಟನೆ ಮತ್ತು ನಗುವಿನಿಂದಲೇ ರಾಜ್ಯವನ್ನು ಗೆದ್ದ ರಾಜನಿದ್ದರೆ ಅದು ಒಬ್ಬರೇ ಒಬ್ಬರು. ಶ್ರೀ ಪುನೀತ್ ರಾಜ್ ಕುಮಾರ್ ಅವರು ಮಾತ್ರ. ಅವರು ಕರ್ನಾಟಕದ ಸೂಪರ್ ಸ್ಟಾರ್. ಒಬ್ಬ ಮಹಾನ್ ನಟನ ಮಗ, ತಂದೆಗೆ ತಕ್ಕ ಮಗ, ಒಬ್ಬ ಮಹಾನ್ ಸ್ನೇಹಿತ, ಒಬ್ಬ ಮಹಾನ್ ತಂದೆ, ಒಬ್ಬ ಅದ್ಭುತ ನಟ, ಒಬ್ಬ ನರ್ತಕ, ಗಾಯಕ, ಮತ್ತು, ಮುಖ್ಯವಾಗಿ, ಒಬ್ಬ ಮಹಾನ್ ಮನುಷ್ಯ. ಪುನೀತ್ ಗಿಂತ ಶ್ರೀಮಂತ ನಗುವನ್ನು ನಾನು ನೋಡಿಲ್ಲ. ಕರ್ನಾಟಕ ರತ್ನ ನೀಡಿದ್ದು ಕರ್ನಾಟಕ ರತ್ನಕ್ಕೆ ಸಿಕ್ಕ ಗೌರವ ಎಂದಿದ್ದರು.
ಅಪ್ಪು ನೆನಪಿಸಿಕೊಂಡ ಸಿದ್ದರಾಮಯ್ಯ:
ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ ಕೋಟ್ಯಂತರ ಜನರ ಮನಸ್ಸಿಗೆ ಮುದ ನೀಡಿದ, ಸರಳತೆ, ಸಜ್ಜನಿಕೆ ಮತ್ತು ಮಾನವೀಯತೆಗೆ ಮತ್ತೊಂದು ಹೆಸರಾಗಿದ್ದ ಕನ್ನಡಿಗರೆಲ್ಲರ ಮನೆ ಮಗ ಪ್ರೀತಿಯ “ಅಪ್ಪುವಿನ” ಜನ್ಮದಿನದಂದು ಅವರನ್ನು ಗೌರವದಿಂದ ನೆನೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.