ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಟೆಂಪಲ್ ರನ್ ಮಾಡ್ತಿರುವ ಡಿಕೆಶಿಗೆ ಯತೀಂದ್ರ ಸಿದ್ದರಾಮಯ್ಯರಿಂದ ಮೂರನೇ ನಾಮ, ದಾರಿ ತಪ್ಪಿದ ಮಗನಂತಾದ ಡಿಸಿಎಂ: ಆರ್. ಅಶೋಕ ವ್ಯಂಗ್ಯ!

On: October 23, 2025 6:18 PM
Follow Us:
ಆರ್. ಅಶೋಕ
---Advertisement---

SUDDIKSHANA KANNADA NEWS/DAVANAGERE/DATE:23_10_2025

ದಾವಣಗೆರೆ: ಎರಡು ನಾಮ ಹಾಕಿಕೊಂಡು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದೇವಸ್ಥಾನ ಸುತ್ತುತ್ತಿದ್ದಾರೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಡಿಕೆಶಿಗೆ ಮೂರನೇ ನಾಮ ಹಾಕಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ವ್ಯಂಗ್ಯವಾಡಿದ್ದಾರೆ.

READ ALSO THIS STORY: ಉತ್ತರಾಧಿಕಾರಿ ಯಾರು ಎಂಬುದು ಪಕ್ಷ ನಿರ್ಧರಿಸುತ್ತದೆ ಎಂದ್ರು ಸತೀಶ್ ಜಾರಕಿಹೊಳಿ: ಎಲ್ಲವೂ ಊಹಾಪೋಹ ಎಂದ್ರು ಪರಂ, ಡಿಕೆಶಿ!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನವೆಂಬರ್ ಕ್ರಾಂತಿ ಎಂದರೆ ಬುರುಡೆ ಅಂತ ಡಿಕೆ ಶಿವಕುಮಾರ್ ಹೇಳಿದ್ದರು. ಈಗ ಯತೀಂದ್ರ ಹೇಳಿದಾಗ ಅದು ಕಾಂಗ್ರೆಸ್ ನವರಿಗೆ ಸರಿಯಾಗಿದೆ ಎಂದೆನಿಸುತ್ತಿದೆ. ನವೆಂಬರ್ ನಲ್ಲಿ ಕ್ರಾಂತಿ ಆಗುತ್ತದೆ ಎಂದಿದ್ದ ಕೆ. ಎನ್. ರಾಜಣ್ಣರನ್ನು ಓಡಿಸಿಯೇ ಬಿಟ್ಟರು ಎಂದು ಹೇಳಿದರು.

ಯತೀಂದ್ರ ಹೇಳಿಕೆ ಹಿಂದೆ ಸಿದ್ದರಾಮಯ್ಯ ಅವರು ಹೇಳಿ ಮಾಡಿಸಿದಂತಿದೆ. ಅದು ಬೆಳಗಾವಿಗೆ ಹೋಗಿ ಸತೀಶ್ ಜಾರಕಿಹೊಳಿ ಮನೆಯಲ್ಲೇ ಉತ್ತರಾಧಿಕಾರಿ ಯಾರೆಂದು ಹೇಳಿದ್ದಾರೆ. ಇದರಿಂದ ಡಿಕೆಶಿಗೆ ನಾಮ ಹಾಕೋದು ಪಕ್ಕಾ ಎಂಬುದು ಗೊತ್ತಾಗುತ್ತದೆ. ಡಿಕೆಶಿ ಒಂಥರ ದಾರಿ ತಪ್ಪಿದ ಮಗನಂತೆ ಆಗಿದ್ದಾರೆ. ಟೆಂಪಲ್ ರನ್ ಮಾಡಿದರೆ ಏನು ಸಿಗೋದಿಲ್ಲ ಅಂತ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಟೆಂಪಲ್‌ ಗಿಂತ ಕಾಂಗ್ರೆಸ್ ನ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ನ ಸುತ್ತಬೇಕು. ಇಟಲಿ ಟೆಂಪಲ್ ನ ಸುತ್ತಿ ಕಪ್ಪ ಕಾಣಿಕೆ ನೀಡಿದರೆ ಮಾತ್ರ ನೀವು ಮಂತ್ರಿ ಮುಖ್ಯಮಂತ್ರಿ ಆಗುತ್ತೀರಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಒಂದು ರೀತಿಯ ಒಡೆದ ಮನೆಯಂತಾಗಿದೆ. ಈ ಸರ್ಕಾರ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಹಾಳಾಗಿ ಹೋಗಲಿ ಎಂದು ಜನರು ಹೇಳುತ್ತಿದ್ದಾರೆ. ಗುತ್ತಿಗೆದಾರರರಿಗೆ 33 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಬಿಡುಗಡೆ ಮಾಡಬೇಕಿದೆ. ನಮ್ಮ ಸರ್ಕಾರದ ಕಾಲದಲ್ಲಿ ಕೆಂಪಣ್ಣ ಎನ್ನುವನನ್ನು ತಂದು ಅರೋಪ‌ ಮಾಡಿದ್ದರು. ಅದು ಯಾವ ಕೋರ್ಟ್ ನಲ್ಲಿ ಕೂಡ ನಿಲ್ಲನಿಲ್ಲ. ಸಾಕ್ಷೀ ಹೇಳಲು ಯಾರು ಬರಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಶೇಕಡಾ 40ರಷ್ಟು ಕಮೀಷನ್ ಇರಲಿಲ್ಲ. ಆದರೆ ಈ ಕಾಂಗ್ರೆಸ್ ಬಂದಮೇಲೆ ಶೇಕಡಾ 60ರಷ್ಟು ಕಮಿಷನ್ ಇದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದಕ್ಕಿಂತ ಭ್ರಷ್ಟಾಚಾರಕ್ಕೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸಚಿವರನ್ನು ಡಿನ್ನರ್ ಪಾರ್ಟಿಗೆ ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದರು. ಇದು ಡಿನ್ನರ್ ಪಾರ್ಟಿ ಅಲ್ಲ ಬಿಹಾರ್ ಚುನಾವಣೆಗೆ ಕಲೆಕ್ಷನ್ ಪಾರ್ಟಿ. ಯಾವ ಯಾವ ಸಚಿವರು ಎಷ್ಟು ಕೊಡ್ತಿರಾ ಎಂದು ಹೇಳಿದ್ದೇ ತಡ ಕೆಲವರು ಊಟ ಮಾಡದೆ ಓಡಿ ಹೋದರು. ಒಬ್ಬೊಬ್ಬ ಸಚಿವರಿಗೆ 300 ರಿಂದ 400 ಕೋಟಿ ಕಲೆಕ್ಷನ್ ಅಂತ ಹೇಳಿದ್ದಾರೆ. ಸಚಿವ ಸ್ಥಾನ ಉಳಿಯಬೇಕು ಎಂದರೆ ಟಾರ್ಗೆಟ್ ರೀಚ್ ಮಾಡಬೇಕು ಎಂದಿದ್ದಾರೆ. ಟಾರ್ಗೆಟ್ ಕೊಟ್ಟು ಹಣ ವಸೂಲಿಯಾದ್ರೆ ಸಚಿವರಾಗಿ ಮುಂದುವರಿಯುತ್ತಾರೆ. ಇಲ್ಲದಿದ್ದರೆ ಸಚಿವ ಸ್ಥಾನದಿಂದ ಗೇಟ್ ಪಾಸ್ ಕೊಡುತ್ತಾರೆ. ಯಾರು ಯಾರು ಮಂತ್ರಿ ಪದವಿಯಿಂದ ಬಿಡ್ತಾರೋ ಅವರೆಲ್ಲ ದುಡ್ಡು ಕೊಟ್ಟಿಲ್ಲ ಅಂತಾನೇ ಅರ್ಥ. ಸಚಿವರಾಗಿ ಮುಂದುವರಿದರೆ ಟಾರ್ಗೆಟ್ ರೀಚ್ ಮಾಡಿದ್ದಾರೆ ಎಂದರ್ಥ. ಇದು ರೆಕಾರ್ಡ್ ಆಗಿ ಉಳಿಯಲಿ ನಾನು ಹೇಳ್ತಾ ಇರೋದು ಸತ್ಯ ಎಂದು ಹೇಳಿದರು.

ಎಲ್ಲಾ ವಿಭಾಗಗಳಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರಕ್ಕೆ ಮಾರ್ಕ್ಸ್ ಕೊಡಬೇಕು ಎಂದರೆ ಎಂದರೆ ಎಲ್ಲಾ ಕ್ಷೇತ್ರದಲ್ಲಿ ಸೊನ್ನೆ ಕೊಡಬೇಕಿದೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದೆ ಖಾಲಿ ಡಬ್ಬ ಹೇಗೆ ಸೌಂಡ್ ಮಾಡುತ್ತೋ ಅದೇ ರೀತಿ ಮಾಡುತ್ತಿದ್ದಾರೆ. ನಾವು ಮಾಡಿದ ರಸ್ತೆ, ಫ್ಲೈ ಓವರ್ ಗಳನ್ನು ಉದ್ಘಾಟನೆ ಮಾಡ್ತಾ ಇರೋದು ಕಾಂಗ್ರೆಸ್ ನವರು. ಕಾಂಗ್ರೆಸ್ ಬಂದು ಎರಡೂವರೆ ವರ್ಷವಾದ್ರು ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲೇ ಹಣ ಇಲ್ಲ, ಇನ್ನೇನು ಅದುದಾನ ಎಲ್ಲಿ ಸಿಗುತ್ತೆ ಹೇಳಿ ಎಂದು ಪ್ರಶ್ನಿಸಿದರು.

ಬಜೆಟ್ ನಲ್ಲಿ ಉಳಿದ ಹಣದಲ್ಲಿ ಬಡ್ಡಿ ಕಟ್ಟೋದು, ಇಲ್ಲ ಡಿಕೆಶಿ ಸಿದ್ದರಾಮಯ್ಯ ಮನೆ ರಿಪೇರಿ ಮಾಡಿಸಿಕೊಳ್ಳೋದೆ ಆಗಿದೆ. ಈ ಸರ್ಕಾರ ಪಾಪರ್ ಆಗಿರುವ ಸರ್ಕಾರವಾಗಿದೆ. ಹಳ್ಳ ಬಿದ್ದಿರುವ ರಸ್ತೆಯನ್ನು, ಅಭಿವೃದ್ಧಿ ಕುಂಠಿತವಾಗಿರುವುದನ್ನು ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಮುಂದೆ ಬಿಟ್ಟಿದ್ದಾರೆ. ಈಗ ಆರ್ ಎಸ್ ಎಸ್, ಏಳೇಸೆಸ್ಸು ಅಂತ ಹುಡುಕುತ್ತಾ ಬಂದಿದ್ದಾರೆ. ಅದರ ನಡುವೆ ಈ ಅಭಿವೃದ್ಧಿ ವಿಚಾರ ಸರ್ಕಾರದ ವೈಫಲ್ಯ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ನ ತಾತಾ ಮುತ್ತಾತನ ಕಾಲದಿಂದಲೂ ಆರ್ ಎಸ್ ಎಸ್ ಇದೆ. ಕಳೆದ ಐದು ವರ್ಷ ಸಿದ್ದರಾಮಯ್ಯ ಸಿಎಂ‌ ಆಗಿದ್ದಾಗ ಇದರ ಬಗ್ಗೆ ಚಕಾರ ಎತ್ತಿಲ್ಲ. ಆದರೆ ಈ ಬಾರಿ ಆರ್ ಎಸ್ ಎಸ್ ಬಗ್ಗೆ‌ಮಾತನಾಡುತ್ತಾರೆ ಎಂದರೆ ಯೋಚಿಸಬೇಕಾಗಿದೆ. ಆಗ ಹಣ ಇತ್ತು ಈಗ ಹಣ ಇಲ್ಲ, ಬರಿ‌ಹೆಣಗಳು ಬೀಳುತ್ತಿವೆ. ಆದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಮಾಡುತ್ತಿರುವ ಕುತಂತ್ರ ಅಷ್ಟೇ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment