SUDDIKSHANA .COM NEWS
DATE: 18_03_2023 SATURDAY
ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಮಾಸ್ ಲೀಡರ್ (MASS LEADER) ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (SIDDARAMAI) ರ ಹಣಿಯಲು ಬಿಜೆಪಿ (BJP), ಜೆಡಿಎಸ್ (JDS) ರಣತಂತ್ರ ರೂಪಿಸಿವೆ. ಸೋಲಿಸಲೇಬೇಕೆಂಬ ಹಠ ತೊಟ್ಟಿವೆ. ಸಿದ್ದರಾಮೋತ್ಸವದ ಬಳಿಕ ಜನಪ್ರಿಯತೆ ಹೆಚ್ಚಿಸಿಕೊಂಡ ಸಿದ್ದರಾಮಯ್ಯರ ಜಂಘಾಬಲ ಎಂಥಾದ್ದು ಎಂಬುದು ಬಿಜೆಪಿ (BJP) ಹೈಕಮಾಂಡ್ ಮಾತ್ರವಲ್ಲ, ಕಾಂಗ್ರೆಸ್ ಹೈಕಮಾಂಡ್ ಗೂ ಅರಿವಾಗಿದೆ.
ಈ ಕಾರಣಕ್ಕಾಗಿ ಸಿದ್ದರಾಮಯ್ಯ ಸೋತರೆ ಪಕ್ಷಕ್ಕೆ ಡ್ಯಾಮೇಜ್ (DAMAGE) ಎಂದು ಅರಿತಿರುವ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಗೆಲ್ಲಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನವದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಈ ಬಗ್ಗೆ ಎಐಸಿಸಿ ಅಧಿನಾಯಕ ಹಾಗೂ ಎಐಸಿಸಿ ಅಧ್ಯಕ್ಷ (AICC PRESIDENT) ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದರೆ ಗೆಲುವು ಸುಲಭ. ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರಾದ್ಯಂತ ಓಡಾಡಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಾರದಿದ್ದರೂ ಪುತ್ರನು ಎಲ್ಲೆಡೆ ಓಡಾಡಿ ಗೆಲ್ಲಿಸುವಷ್ಟ ಸಾಮರ್ಥ್ಯ ಹೊಂದಿದ್ದಾರೆ. ಬಿಜೆಪಿಯ ರಣತಂತ್ರಕ್ಕೆ ಠಕ್ಕರ್ ಕೊಡಲು ಈ ಮೂಲಕ ಕಾಂಗ್ರೆಸ್ (CONGRESS) ಈ ನಿರ್ಧಾರಕ್ಕೆ ಬಂದಿದೆ. ಇನ್ನು ಕಾಂಗ್ರೆಸ್ ನ ಕೆಲ ಮುಖಂಡರು ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಒಳಸಂಚು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರಕ್ಕೆ ಬರಲು ಇದೂ ಪ್ರಮುಖ ಕಾರಣ ಎನ್ನಲಾಗಿದೆ. ಕಾಂಗ್ರೆಸ್ ಆಂತರಿಕ ವರದಿಯ ಪ್ರಕಾರ ಸಿದ್ದರಾಮಯ್ಯರನ್ನು ಸೋಲಿಸಲು ಕೇವಲ ಬಿಜೆಪಿ, ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ನ ಕೆಲ ನಾಯಕರು ಒಳಸಂಚು ರೂಪಿಸಿರುವ ಕುರಿತಂತೆ ವರದಿ ಹೋಗಿದೆ ಎಂದು ನವದೆಹಲಿಯ ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.
ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ನಾನು ಹೈಕಮಾಂಡ್ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂಬ ಮಾತನ್ನು ಪದೇ ಪದೇ ಹೇಳತೊಡಗಿದ್ದಾರೆ. ಬಹುತೇಕ ಕೋಲಾರ ಫಿಕ್ಸ್ ಆಗಿತ್ತು.
ಸಿದ್ದರಾಮಯ್ಯ ಮನೆಯನ್ನೂ ಮಾಡಿದ್ದರು. ನಾಯಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನೂ ಮಾಡಿದ್ದರು. ಆದ್ರೆ, ಅಲ್ಲಿನ ಗುದ್ದಾಟ, ಗಲಾಟೆ, ಭಿನ್ನಾಭಿಪ್ರಾಯ, ಆಂತರಿಕ ಕಚ್ಚಾಟಕ್ಕೆ ಮದ್ದು ಎರೆಯಲು ಹೋಗಿದ್ದ ಸಿದ್ದರಾಮಯ್ಯರಿಗೆ ಆಗಾಗ್ಗೆ ಸಮಸ್ಯೆ ಆಗುತ್ತಲೇ ಇತ್ತು. ಇದನ್ನೆಲ್ಲಾ ಅರಿತ ಕಾಂಗ್ರೆಸ್ ಹೈಕಮಾಂಡ್ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಮಗನಿಂದ ಕ್ಷೇತ್ರ ಪಡೆದು ಕುಟುಂಬ ರಾಜಕಾರಣ ಮಾಡುತ್ತಿಲ್ಲ ಎಂಬ ಹೊಸ ದಾಳ ಉರುಳಿಸಲು ಮುಂದಾಗಿದೆ.
ಈ ಹೊಸ ದಾಳ ಉರುಳಿಸಲು ಪ್ರಮುಖ ಕಾರಣ ಜೆಡಿಎಸ್ ನ ಕುಟುಂಬ ರಾಜಕಾರಣ. ಬಿಜೆಪಿಯ ಸರ್ವೋಚ್ಚ ನಾಯಕ ಬಿ. ಎಸ್. ಯಡಿಯೂರಪ್ಪ ಪುತ್ರನಿಗಾಗಿ ಕ್ಷೇತ್ರ ಬಿಟ್ಟು ಕೊಟ್ಟರೆ, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರನಿಂದ ಕ್ಷೇತ್ರ ಪಡೆಯುವ ಮೂಲಕ ಕುಟುಂಬ ರಾಜಕಾರಣಕ್ಕೆ ಒಲ್ಲೆ ಎಂಬ ಸಂದೇಶ ನೀಡಿದರು ಎಂಬುದನ್ನು ಚುನಾವಣೆಯಲ್ಲಿ ಪ್ರಚುರಪಡಿಸಲು ಯೋಜನೆ ರೂಪಿಸಿದೆ.