ಬೆಂಡೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ
- ಗರಂ ಮಸಾಲ
- ಕಡಲೆ ಹಿಟ್ಟು
- ಅರಶಿನ
- ಖಾರದ ಪುಡಿ
- ಧನಿಯ
- ತೆಂಗಿನ ಕಾಯಿ ತುರಿ
- ಮೊಸರು
- ಸಾಸಿವೆ
- ಜೀರಿಗೆ
- ಈರುಳ್ಳಿ
- ಉಪ್ಪು
- ಎಣ್ಣೆ
ಬೆಂಡೆಕಾಯಿ ಪಲ್ಯ ಮಾಡುವ ವಿಧಾನ
ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಏಕೆಂದರೆ ಸಣ್ಣದಾಗಿ ಕತ್ತರಿಸಿಕೊಂಡಾಗ ಬೇಗ ಬೇಯುತ್ತದೆ. ಎಳೆ ಬೆಂಡೆಕಾಯಿಯನ್ನು ಆಯ್ದು ತರಬೇಕು. ಈ ಬೆಂಡೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಇಡಬೇಕು. ಈಗ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಕತ್ತರಿಸಿಕೊಂಡ ಬೆಂಡೆಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
ಹೀಗೆ ಫ್ರೈ ಮಾಡಿಕೊಳ್ಳುವುದರಿಂದ ಬೆಂಡೆಕಾಯಿ ಲೋಳೆಯಾಗಿರುವುದಿಲ್ಲ. ಗರಂ ಗರಂ ಆಗಿರಲಿದೆ. ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅರಶೀನ ಪುಡಿ, ಉಪ್ಪು ಹಾಕಿಕೊಂಡಿ ಹಿಟ್ಟಿನಂತಾಗುವಂತೆ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಬೆಣಸಿನ ಬಜ್ಜಿಗೆ ಮಾಡುವಂತೆ ಹಿಟ್ಟಿನಂತೆ ಮಾಡಿಕೊಳ್ಳಿ. ಈ ಹಿಟ್ಟನ್ನು ಫ್ರೈ ಮಾಡಿಕೊಂಡಿರುವ ಬೆಂಡೆಕಾಯಿಗೆ ಈ ಮಿಕ್ಸ್ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಒಂದು ಬೌಲ್‌ಗೆ ಗಟ್ಟಿ ಮೊಸರು, ಧನಿಯ, ಖಾರದ ಪುಡಿ, ಗರಂ ಮಸಾಲ, ತೆಂಗಿನ ಕಾಯಿ ತುರಿ, ಉಪ್ಪು ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಈಗ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಜೀರಿಗೆ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಮೊಸರು ಹಾಕಿ ಮಿಕ್ಸ್ ಮಾಡಿಕೊಂಡ ಮಿಶ್ರಣವನ್ನು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಹಿಟ್ಟಿನಿಂದ ಮಿಕ್ಸ್ ಮಾಡಿರುವ ಬೆಂಡೆಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಕೊನೆಯಾದಗಿ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೊಸ ರುಚಿಯ ಬೆಂಡೆಕಾಯಿ ಪಲ್ಯ ರೆಡಿಯಾಗಿರುತ್ತದೆ. ಇದನ್ನು ಊಟ, ತಿಂಡಿಗೆ ಬಿಸಿಯಾಗಿದ್ದಾಗಲೇ ಸವಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ.