Home ದಾವಣಗೆರೆ ಸೂರ್ಯಪಥ ಬದಲಾಗುವ ಸಂಕ್ರಾಂತಿಗೆ ಬದಲಾವಣೆಯಾಗುತ್ತೆ, ಯಾರಿಗೆ ಒಳ್ಳೆಯದಾಗುತ್ತೋ ಗೊತ್ತಿಲ್ಲ: ಶಿವಗಂಗಾ ಬಸವರಾಜ್
ದಾವಣಗೆರೆನವದೆಹಲಿಬೆಂಗಳೂರು

ಸೂರ್ಯಪಥ ಬದಲಾಗುವ ಸಂಕ್ರಾಂತಿಗೆ ಬದಲಾವಣೆಯಾಗುತ್ತೆ, ಯಾರಿಗೆ ಒಳ್ಳೆಯದಾಗುತ್ತೋ ಗೊತ್ತಿಲ್ಲ: ಶಿವಗಂಗಾ ಬಸವರಾಜ್

Share
ಶಿವಗಂಗಾ ಬಸವರಾಜ್
Share

ದಾವಣಗೆರೆ: ಡಿಸಿಎಂ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಆಸೆ ಇರುವುದು ನಿಜ. ಜನರಿಗೆ ತಪ್ಪು ಮಾಹಿತಿ ನೀಡಬಾರದು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ. ಒಂದು ಮತ ಕಾಂಗ್ರೆಸ್ ಗೆ ಚುನಾವಣೆ ವೇಳೆ ಚಲಾಯಿಸಿದವರೂ ಸರ್ಕಾರ ಬರಲು ಕಾರಣ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ಈ ಸುದ್ದಿಯನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಿಮಗ್ಯಾಕೆ ಇಷ್ಟು ಕೋಪ, ಕೆಳಗಿಳಿಸಲು ನಿಮಗೆ ಬೇರೆ ಕಡೆಯಿಂದ ಇದ್ಯಾ ಒತ್ತಡ: ಮಾಧ್ಯಮದವರ ವಿರುದ್ಧ ಬುಸುಗುಟ್ಟಿದ ಶಿವಗಂಗಾ ಬಸವರಾಜ್!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದವರು ಕೆದಕಿ ಕೆದಕಿ ಕೇಳಿದಾಗ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯರು ನಾನೇ ಐದು ವರ್ಷ ಮುಖ್ಯಮಂತ್ರಿ ಎಂದಿದ್ದಾರೆ. ಇದು ಸಹಜ ಕೂಡ. ನಾನು ಅಧಿವೇಶನದಲ್ಲಿ ಇದ್ದು ಸಿಎಂ ಮಾತು ಕೇಳಿಸಿಕೊಂಡಿದ್ದೇನೆ. ಹೈಕಮಾಂಡ್ ನಾಳೆ ತೀರ್ಮಾನ ಮಾಡಿದರೂ ಆಯ್ತು. ಹತ್ತು ವರ್ಷ ಬಿಟ್ಟು ಮಾಡಿದರೂ ಆಯ್ತು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಯಾವಾಗಲೂ ಬದ್ದರಿರುತ್ತೇವೆ ಎಂದು ಹೇಳಿದರು.

ನಾನು ದೈವ ಭಕ್ತರು. ಡಿ. ಕೆ. ಶಿವಕುಮಾರ್ ಅವರೂ ದೈವಭಕ್ತರು. ಯಾವಾಗಲೂ ನನ್ನ ಬೇಡಿಕೆ ಇದೆ. ಟಿಕೆಟ್ ಘೋಷಣೆಯಾಗಿದನಿಂದಲೂ ಅವರ ಪರವೇ ನಾನು ನಿಂತಿದ್ದೇನೆ ಎಂದ ಅವರು, ಸೂರ್ಯಪಥ ಬದಲಾವಣೆ ಸಂಕ್ರಾಂತಿಗೆ ಆಗುತ್ತದೆ. ಒಳ್ಳೆಯದಾಗುವುದು ಸಹಜ. ನಮಗೆ ಒಳ್ಳೆಯದಾಗುತ್ತೋ ಬೇರೆಯವರಿಗೆ ಆಗುತ್ತೋ ಗೊತ್ತಿಲ್ಲ. ಒಟ್ಟಾರೆ ಯಾರಿಗಾದರೂ ಒಳ್ಳೆಯದಾಗಲಿ ಎಂಬುದಷ್ಟೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಬ್ರಾಹ್ಮಣರು, ಒಕ್ಕಲಿಗರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಯಾವ ಧರ್ಮ ಮತ್ತು ಸಮುದಾಯದವರಾದರೂ ಸಿಎಂ ಆಗಬಹುದು. ಎಲ್ಲಾ ಧರ್ಮ, ಜಾತಿ, ಸಮುದಾಯದವರು ಸಿಎಂ ಆಗುವ ಸಾಮರ್ಥ್ಯ ಹೊಂದಿರುವ ನಾಯಕರಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಅಹಿಂದ ಸಮುದಾಯವದರು ಡಿ. ಕೆ. ಶಿವಕುಮಾರ್ ಅವರನ್ನು ಒಪ್ಪಿದ್ದಾರೆ. ಅಹಿಂದ ಮಠಾಧೀಶರು ಅವರ ಪರ ಇದ್ದಾರೆ. ಎಲ್ಲರೂ ಒಪ್ಪಿಕೊಳ್ಳುವ ನಾಯಕರು ಡಿ. ಕೆ. ಶಿವಕುಮಾರ್ ಎಂದು ಶಿವಗಂಗಾ ಬಸವರಾಜ್ ಹೇಳಿದರು.

Share

Leave a comment

Leave a Reply

Your email address will not be published. Required fields are marked *