Site icon Kannada News-suddikshana

ನೀವೂ ಪದವೀಧರರ, ನಿಮಗೊಂದು ಅವಕಾಶ: ಖಾಸಗಿ ಕಂಪನಿಗಳಿಂದ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ, ಕೆಲಸ ಪಡೆದುಕೊಳ್ಳಿ

SUDDIKSHANA KANNADA NEWS/ DAVANAGERE/ DATE:29-05-2023

ದಾವಣಗೆರೆ(DAVANAGERE): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ‘ಮಾದರಿ ವೃತ್ತಿ ಕೇಂದ್ರ’ ದಾವಣಗೆರೆ ಇವರ ವತಿಯಿಂದ ಮೇ.31 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ನೇರ ಸಂದರ್ಶನದಲ್ಲಿ ದೇಶಪಾಂಡೆ ಫೌಂಡೇಶನ್, ಅನ್‍ಮೋಲ್ ಪಬ್ಲಿಕ್ ಸ್ಕೂಲ್, ಹಾಗೂ ಇತರೆ ದಾವಣಗೆರೆಯ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ, ಎಂ.ಎ, ಬಿಇಡಿ, ಎಂಎಸ್ಸಿ ಬಿಇಡಿ, ಎಂ.ಕಾಂ, ಎಂಬಿಎ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ 18-30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮೊ.ಸಂ: 6361550016, ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ

ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ:

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗಾಗಿ ಜುಲೈ 11 ರಿಂದ 15ರವರೆಗೆ ಇಂಟಲೆಕ್ಚಲ್ ಪ್ರಾಪರ್ಟಿ ರೈಟ್ಸ್ [ಪಿಆರ್] ಅಂಡ್ ಎಂಟ್ರಪ್ರನರ್‍ಶಿಪ್ ಡೆವೆಲಪ್‍ಮೆಂಟ್ ಕಾರ್ಯಾಗಾರ ಆಯೋಜಿಸಲಾಗಿದೆ.

ಕಾರ್ಯಾಗಾರವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರೊ. ಯು.ಆರ್ ರಾವ್, ವಿಜ್ಞಾನ ಭವನ, ಜಿ.ಕೆ.ವಿ.ಕೆ ಆವರಣ, ಮೇಜರ್ ಉನ್ನೀಕೃಷ್ಣನ್ ರಸ್ತೆ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು, (ದೂ. ಸಂ: 080-29721550) ಇಲ್ಲಿ ನಡೆಸಲಾಗುತ್ತಿದ್ದು, ಭಾಗವಹಿಸಲು ಇಚ್ಚಿಸುವವರು ಜುಲೈ 5 ರೊಳಗಾಗಿ ನೊಂದಾಯಿಸಿಕೊಳ್ಳಬೇಕು.

Exit mobile version