Site icon Kannada News-suddikshana

ಇನ್ನೆರಡು ತಿಂಗಳಲ್ಲಿ ಯತ್ನಾಳ್ ವಿರೋಧ ಪಕ್ಷದ ನಾಯಕರಾಗಬಹುದು: ಶಾಸಕ ಬಿ. ಪಿ. ಹರೀಶ್ ಸ್ಫೋಟಕ ಮಾಹಿತಿ!

SUDDIKSHANA KANNADA NEWS/ DAVANAGERE/ DATE:20-01-2025

ದಾವಣಗೆರೆ: ನಾಯಕ ಎಂದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ರಂತೆ ಇರಬೇಕು. ಇನ್ನೆರಡು ತಿಂಗಳಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷ ನಾಯಕರಾಗಬಹುದು ಎಂದು ಬಿಜೆಪಿ ಶಾಸಕ ಬಿ. ಪಿ. ಹರೀಶ್ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ ಬಸನಗೌಡ ಪಾಟೀಲ್ ಯತ್ನಾಳ್. ಯಾವುದೇ ಹೊಂದಾಣಿಕೆ ಇಲ್ಲದೇ ನೇರವಾಗಿ ಮಾತನಾಡುವ ನಾಯಕ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿನ ಬಿಜೆಪಿ ಬಣ ಬಡಿದಾಟದ ಕುರಿತಂತೆ ಮಾತನಾಡಿದ ಅವರು, ಇನ್ನೆರಡು ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ವಿರೋಧ ಪಕ್ಷದ ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆದರೂ ಆಗಬಹುದು. ನಮ್ಮೆಲ್ಲರ ಒಮ್ಮತದ ಬಿಜೆಪಿ ರಾಜ್ಯಾಧ್ಯಕ್ಷ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಯಾವುದೇ ರೀತಿಯ ಹೊಂದಾಣಿಕೆ ರಾಜಕೀಯ ಮಾಡುವುದಿಲ್ಲ
ಎಂದು ಹರೀಶ್ ಹೇಳಿದರು.

 

Exit mobile version