Site icon Kannada News-suddikshana

ವಿಜಯೇಂದ್ರ ಪರವಾಗಿ ವರದಿಗಳು ಬರ್ತಿದೆ, ನಮ್ಮ ವಿರುದ್ದವೂ ಬರ್ತಾ ಇವೆ: ಬಸನಗೌಡ ಪಾಟೀಲ್ ಯತ್ನಾಳ್!

SUDDIKSHANA KANNADA NEWS/ DAVANAGERE/ DATE:09-02-2025

ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಪರವಾಗಿ ವರದಿಗಳು ಬರುತ್ತಿವೆ. ನಮ್ಮ ವಿರುದ್ಧವೂ ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ವಿಜಯಪುರ ಶಾಸಕ ಹಾಗೂ ಬಿಜೆಪಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣನವರ ಗೃಹಪ್ರವೇಶ ಇದೆ. ದೆಹಲಿಗೆ ಹೋಗುತ್ತೇವೆ. ಬಿಜೆಪಿ ವರಿಷ್ಠರು ನಮ್ಮ ವಿರುದ್ಧ ಕಿಡಿಕಾರಿದ್ದಾರೆ ಎಂಬ ವರದಿ ಮಾಡಿದ್ದ ಮಾಧ್ಯಮಗಳ
ವಿರುದ್ಧವೂ ಗುಡುಗಿದರು.

ವಿಜಯೇಂದ್ರ ಅವರಿಗೆ ಎಷ್ಟು ಅಪಮಾನವಾದರೂ ಇನ್ನೂ ಇದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಉರ್ಲು ಹಾಕಿಕೊಳ್ಳಬೇಕಿತ್ತು. ನಾವು ಹಾಕಿಕೊಳ್ಳುವವರಲ್ಲ. ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಸಿಗುತ್ತಾರೋ ಇಲ್ಲವೋ ಎನ್ನುವುದು ನಿಮಗೆ ಏಕೆ ಹೇಳಲಿ ಎಂದು ಪ್ರಶ್ನಿಸಿದರು.

ನಾವು ದೆಹಲಿಗೆ ಹೋಗುತ್ತೇವೆ ನಮ್ಮ ಪ್ರಯತ್ನ ಮಾಡುತ್ತೇವೆ. ಭ್ರಷ್ಟಾಚಾರ ಮಾಡುವವರನ್ನು, ಕುಟುಂಬ ರಾಜಕಾರಣದ ವಿರುದ್ದ ನಾವು ಇದ್ದೇವೆ ಎಂದು ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

Exit mobile version