Home ದಾವಣಗೆರೆ ದಿನಾ ಇಂಜೆಕ್ಷನ್ ತಗೊಳ್ಬೇಕಾಗಿಲ್ಲ! ಮಧುಮೇಹಿಗಳ ನೆರವಿಗೆ ಬಂತು ವಿಶ್ವದ ಮೊದಲ ‘ವಾರಕ್ಕೊಮ್ಮೆ’ ನೀಡುವ ಇನ್ಸುಲಿನ್ ‘Awiqli’!
ದಾವಣಗೆರೆನವದೆಹಲಿಬೆಂಗಳೂರು

ದಿನಾ ಇಂಜೆಕ್ಷನ್ ತಗೊಳ್ಬೇಕಾಗಿಲ್ಲ! ಮಧುಮೇಹಿಗಳ ನೆರವಿಗೆ ಬಂತು ವಿಶ್ವದ ಮೊದಲ ‘ವಾರಕ್ಕೊಮ್ಮೆ’ ನೀಡುವ ಇನ್ಸುಲಿನ್ ‘Awiqli’!

Share
ಮಧುಮೇಹಿ
Share

ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಧುಮೇಹ (Diabetes) ರೋಗಿಗಳಿಗೆ ಜಾಗತಿಕ ಔಷಧ ತಯಾರಿಕಾ ಸಂಸ್ಥೆಯಾದ ‘ನೋವೋ ನಾರ್ಡಿಸ್ಕ್’ (Novo Nordisk) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ವಯಸ್ಕ ಟೈಪ್-1 ಮತ್ತು ಟೈಪ್-2 ಮಧುಮೇಹಿಗಳಿಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳಬಹುದಾದ ವಿಶೇಷ ಬಾಸಲ್ ಇನ್ಸುಲಿನ್ ‘Awiqli’ (ಇನ್ಸುಲಿನ್ ಐಕೋಡೆಕ್) ಅನ್ನು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪರಿಚಯಿಸಿದೆ.

ವಿವರಗಳು:

ಇದುವರೆಗೆ ಮಧುಮೇಹ ನಿಯಂತ್ರಣಕ್ಕಾಗಿ ರೋಗಿಗಳು ವರ್ಷಕ್ಕೆ ಕನಿಷ್ಠ 365 ದಿನಗಳೂ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈ ಹೊಸ ಇನ್ಸುಲಿನ್ ಆವಿಷ್ಕಾರದಿಂದಾಗಿ ಇನ್ನು ಮುಂದೆ ವರ್ಷಕ್ಕೆ ಕೇವಲ 52 ಇಂಜೆಕ್ಷನ್ ಪಡೆದರೆ ಸಾಕಾಗುತ್ತದೆ. ಅಂದರೆ ವಾರಕ್ಕೆ ಕೇವಲ ಒಂದು ಡೋಸ್ ಮಾತ್ರ ತೆಗೆದುಕೊಳ್ಳಬೇಕಿರುವುದರಿಂದ ರೋಗಿಗಳ ಮೇಲಿನ ದೈಹಿಕ ಹಾಗೂ ಮಾನಸಿಕ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.

ಭಯ ಮತ್ತು ನಿರ್ಲಕ್ಷ್ಯಕ್ಕೆ ಮುಕ್ತಿ:

ಭಾರತದಲ್ಲಿ ಇನ್ಸುಲಿನ್ ಚಿಕಿತ್ಸೆ ಆರಂಭಿಸಲು ರೋಗಿಗಳು ಸರಾಸರಿ 7 ರಿಂದ 9 ವರ್ಷಗಳಷ್ಟು ತಡ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಪ್ರಮುಖ ಕಾರಣ ಪ್ರತಿದಿನ ಇಂಜೆಕ್ಷನ್ ಚುಚ್ಚಿಕೊಳ್ಳಬೇಕೆಂಬ ಭಯ ಮತ್ತು ನೋವು. ಈಗ ವಾರಕ್ಕೊಮ್ಮೆ ಮಾತ್ರ ಫ್ಲೆಕ್ಸ್-ಟಚ್ (FlexTouch) ಪೆನ್ ಮೂಲಕ ಸುಲಭವಾಗಿ ಇದನ್ನು ತೆಗೆದುಕೊಳ್ಳಬಹುದಾಗಿರುವುದರಿಂದ, ರೋಗಿಗಳು ತಡ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಆರಂಭಿಸಲು ಇದು ಪ್ರೇರೇಪಿಸಲಿದೆ.

ಕ್ಲಿನಿಕಲ್ ಸಂಶೋಧನೆಯಲ್ಲಿ ಯಶಸ್ಸು:

ನೋವೋ ನಾರ್ಡಿಸ್ಕ್ ಸಂಸ್ಥೆಯ ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ದಿನನಿತ್ಯ ತೆಗೆದುಕೊಳ್ಳುವ ಸಾಮಾನ್ಯ ಇನ್ಸುಲಿನ್‌ಗಿಂತಲೂ (Glargine U100) ಈ ಹೊಸ ‘Awiqli’ ಇನ್ಸುಲಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು (HbA1c) ನಿಯಂತ್ರಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಅಲ್ಲದೆ, ಸಕ್ಕರೆ ಪ್ರಮಾಣ ದಿಢೀರನೆ ಕುಸಿಯುವ (Hypoglycaemia) ಅಪಾಯವನ್ನು ತಡೆದು, ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಕೀಯ ತಜ್ಞರು ಧೃಡಪಡಿಸಿದ್ದಾರೆ.

ಭಾರತದಲ್ಲಿ ಸದ್ಯ 10 ಕೋಟಿಗೂ ಅಧಿಕ ಮಧುಮೇಹಿಗಳಿದ್ದು, ಅಬಾಟ್ (Abbott) ಸಂಸ್ಥೆಯ ಸಹಭಾಗಿತ್ವದೊಂದಿಗೆ ನೋವೋ ನಾರ್ಡಿಸ್ಕ್ ಈ ಕ್ರಾಂತಿಕಾರಿ ಔಷಧವನ್ನು ದೇಶದಾದ್ಯಂತ ವಿತರಿಸಲು ಸಜ್ಜಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles