Site icon Kannada News-suddikshana

ಮೆಡಿಕವರ್ ಆಸ್ಪತ್ರೆಯಲ್ಲಿ ವರ್ಲ್ಡ್ ಹಾರ್ಟ್ ಡೇ ಪ್ರಯುಕ್ತ ವಾಕ್‌ಥಾನ್

ಹಾರ್ಟ್

SUDDIKSHANA KANNADA NEWS/DAVANAGERE/DATE:29_09_2025

ಬೆಂಗಳೂರು: ಮೆಡಿಕವರ್ ಆಸ್ಪತ್ರೆ, ವೈಟ್‌ಫೀಲ್ಡ್ ನಲ್ಲಿ ವರ್ಲ್ಡ್ ಹಾರ್ಟ್ ಡೇ ಪ್ರಯುಕ್ತ ವಾಕ್‌ಥಾನ್ ಆಯೋಜಿಸಲಾಯಿತು. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಜೀವನಶೈಲಿಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

READ ALSO THIS STORY: ರಾಹುಲ್ ಗಾಂಧಿಯ ಎದೆಗೆ ಗುಂಡು ಹಾರುತ್ತೆ: ಬಿಜೆಪಿ ನಾಯಕನ ವಿರುದ್ಧ ಕ್ರಮಕ್ಕೆ ಅಮಿತ್ ಶಾಗೆ ಕಾಂಗ್ರೆಸ್ ಆಗ್ರಹ!

ಬೆಳಿಗ್ಗೆ 6:30 ಗಂಟೆಗೆ ಆಸ್ಪತ್ರೆ ಆವರಣದಿಂದ ವಾಕ್‌ಥಾನ್‌ಗೆ ಚಾಲನೆ ದೊರೆತು, ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಮುದಾಯದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಒಟ್ಟು 2 ಕಿಮೀ ವಾಕ್‌ಥಾನ್ ನಡೆಯಿತು.

ಯುನಿಟ್ ಹೆಡ್ ಕೃಷ್ಣಮೂರ್ತಿ ಸ್ವಾಗತ ಭಾಷಣ ಮಾಡಿದರು. ಡಾ. ನಾಗ ಶ್ರೀನಿವಾಸ್ ವರ್ಲ್ಡ್ ಹಾರ್ಟ್ ಡೇ ಮಹತ್ವ ಮತ್ತು ವಾಕ್‌ಥಾನ್ ಉದ್ದೇಶವನ್ನು ವಿವರಿಸಿದರು. ಹೃದಯ ತಜ್ಞರಾದ ಡಾ. ರಾಘವೇಂದ್ರ ಚಿಕಟೂರು ಮತ್ತು ಡಾ. ಮೇಜರ್ ಜಯಪ್ರಸಾದ ಸಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಕಾರ್ಯಕ್ರಮಕ್ಕೆ ಸನ್ ಫಾರ್ಮಾ ಮುಖ್ಯ ಪ್ರಾಯೋಜಕರಾಗಿದ್ದು, ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮ ಸಹಭಾಗಿಯಾಗಿತ್ತು.

Exit mobile version