Home ಕ್ರೈಂ ನ್ಯೂಸ್ “ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಕೇಸ್: ನಾಯಿ ಮಾಲೀಕರ ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಿ”
ಕ್ರೈಂ ನ್ಯೂಸ್ದಾವಣಗೆರೆ

“ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಕೇಸ್: ನಾಯಿ ಮಾಲೀಕರ ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಿ”

Share
ನಾಯಿ
Share

SUDDIKSHANA KANNADA NEWS/DAVANAGERE/DATE:06_12_2025

ದಾವಣಗೆರೆ: ಮಹಿಳೆ ಸಾವಿಗೆ ಕಾರಣರಾದ ನಾಯಿ ಮಾಲೀಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಡಿಎಸ್ಪಿ ಬಸವರಾಜ ಅವರಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ: ನ್ಯಾಮತಿ ಮೂಲದ ಶಿವಮೊಗ್ಗ ಸ್ತ್ರೀರೋಗ ತಜ್ಞೆ ಮತ್ತು ಪುತ್ರ ಸಾವಿಗೆ ಶರಣು: ಆತ್ಮಹತ್ಯೆಗೆ ಕುಟುಂಬವೇ ನಾಮಾವಶೇಷ!

ಗುರುವಾರ ರಾತ್ರಿ ರಾಟ್ ವೈಲರ್ ನಾಯಿ ದಾಳಿಗೊಳಗಾಗಿ ನಗರ ಸಮೀಪದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಬಡಾವಣೆಯ ನಿವಾಸಿ ಅನಿತಾ ( 38) ಮೃತಪಟ್ಟಿದ್ದರು. ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಪಾರ್ಥೀವ ಶರೀರಕ್ಕೆ ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಬಳಿಕ ನಡೆದ ಘಟನೆ ಬಗ್ಗೆ ವಿವರ ಪಡೆದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಬೀದಿ ನಾಯಿಗಳ ಸಂತಾನೋತ್ಪತ್ತಿ ಆಗದಂತೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *