SUDDIKSHANA KANNADA NEWS/DAVANAGERE/DATE:03_01_2026
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಲಿದೆ. ಶಾಮನೂರು ಕುಟುಂಬದವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳ ನಡುವೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದಂಪತಿ ಹಿರಿಯ ಪುತ್ರ ಸಮರ್ಥ್ ಶಾಮನೂರು ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಭದ್ರಾ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು: ತಿರುಗಾಟ, ದನಕರು ತೊಳೆಯುವುದು ಸೇರಿ ಚಟುವಟಿಕೆಗಳಿಗೆ ನಿಷೇಧ
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಗ್ಗೆ ನಾವಿನ್ನೂ ಏನೂ ತೀರ್ಮಾನ ಮಾಡಿಲ್ಲ. ಅದರ ಬಗ್ಗೆ ಯೋಚಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಮರ್ಥ್ ಶಾಮನೂರು ಅವರನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತದೆ ಎಂಬ ಸುದ್ದಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ಕುರಿತಂತೆ ಏನನ್ನೂ ಮಾತನಾಡಿಲ್ಲ. ಕುಟುಂಬದವರು ಚರ್ಚೆ ನಡೆಸಿಯೂ ಇಲ್ಲ. ನಮ್ಮಪ್ಪ ನಿಧನರಾದ ಯೋಚನೆಯಲ್ಲಿ ನಾವಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡೋಣ. ಈಗ ದಾವಣಗೆರೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಕುರಿತಂತೆ ಸಭೆ ನಡೆಸಿದ್ದೇವೆ. ಹಬ್ಬದ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ. ರಾಜಕಾರಣ ಈಗ ಬೇಡ ಎಂದು ಹೇಳಿದರು.
ಇನ್ನು ಸಮರ್ಥ್ ಶಾಮನೂರು ತಾಯಿ ಹಾಗೂ ಸಂಸದೆಯೂ ಆಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಲಿದೆ. ಉಪಚುನಾವಣೆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಶಾಮನೂರು ಶಿವಶಂಕರಪ್ಪಾಜಿ ಆರು ಬಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿದ್ದರು. ಜನರಿಗೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ. ಹೈಕಮಾಂಡ್ ಗೂ ಜನರ ಪಲ್ಸ್ ಗೊತ್ತು. ಹೈಕಮಾಂಡ್ ಸೂಕ್ತ ಅಭ್ಯರ್ಥಿ ಘೋಷಿಸುತ್ತದೆ. ಇದಕ್ಕೆ ಬದ್ದರಾಗಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಸಮರ್ಥ್ ಸ್ಪರ್ಧೆ ಕುರಿತಂತೆ ಯಾವುದೇ ಚರ್ಚೆ ಆಗಿಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಮ್ಮೆ ಪರವಾಗಿ ಓಡಾಡಿದ್ದು, ಜನರ ಪರವಾಗಿ ಕೆಲಸ ಮಾಡುತ್ತಾರೆಂಬ ನಂಬಿಕೆ ಜನರಲ್ಲಿದೆ. ಎಲ್ಲರೂ
ಸಮರ್ಥ್ ಶಾಂತ ಸ್ವಭಾವ, ಒಳ್ಳೆಯ ಹುಡುಗ ಎಂದು ಆಶೀರ್ವಾದ ಮಾಡಿದ್ದಾರೆ. ಸಮರ್ಥ್ ಅಭ್ಯರ್ಥಿ ಎಂಬುದು ನಮ್ಮ ಯಾರ ಮನಸ್ಸಿನಲ್ಲಿಯೂ ಸದ್ಯಕ್ಕೆ ಇಲ್ಲ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.
- DAVANAGERE
- Davanagere mp news Prabha Mallikarjun News Updates
- DAVANAGERE NEWS
- DAVANAGERE NEWS UPDATES
- DAVANAGERE VARTHE
- MINISTER S. S. MALLIKARJUN
- Prabha Mallikarjun
- Prabha Mallikarjun Davanagere mp
- Prabha Mallikarjun News
- Prabha Mallikarjun News Updates
- S. S. MALLIKARJUN
- S. S. MALLIKARJUN NEWS
- S. S. MALLIKARJUN NEWS UPDATES
- ಎಸ್. ಎಸ್. ಮಲ್ಲಿಕಾರ್ಜುನ್
- ಎಸ್. ಎಸ್. ಮಲ್ಲಿಕಾರ್ಜುನ್ - ಸಚಿವರು
- ಎಸ್. ಎಸ್. ಮಲ್ಲಿಕಾರ್ಜುನ್ ನ್ಯೂಸ್
- ಎಸ್. ಎಸ್. ಮಲ್ಲಿಕಾರ್ಜುನ್ ಲೇಖನ
- ಎಸ್. ಎಸ್. ಮಲ್ಲಿಕಾರ್ಜುನ್ ಸುದ್ದಿ
- ತಾಯಿ ಆಸೆ ಈಡೇರಿಸಿದ ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ
- ದಾವಣಗೆರೆ ನಗರ
- ದಾವಣಗೆರೆ ನ್ಯೂಸ್
- ದಾವಣಗೆರೆ ವಾರ್ತೆ
- ದಾವಣಗೆರೆ ಸಿಟಿ
- ದಾವಣಗೆರೆ ಸುದ್ದಿ
- ಪ್ರಭಾ ಮಲ್ಲಿಕಾರ್ಜುನ್
- ಪ್ರಭಾ ಮಲ್ಲಿಕಾರ್ಜುನ್ - ದಾವಣಗೆರೆ ಸಂಸದೆ
- ಪ್ರಭಾ ಮಲ್ಲಿಕಾರ್ಜುನ್ - ಸಂಸದರು
- ಪ್ರಭಾ ಮಲ್ಲಿಕಾರ್ಜುನ್ ಕಾರ್ಯ
- ಪ್ರಭಾ ಮಲ್ಲಿಕಾರ್ಜುನ್ ನ್ಯೂಸ್
- ಪ್ರಭಾ ಮಲ್ಲಿಕಾರ್ಜುನ್ ಸುದ್ದಿ
- ಸಚಿವ ಎಸ್. ಎಸ್. ಮಲ್ಲಿಕಾರ್ಜುನ್






Leave a comment