ಬೆಂಗಳೂರು: ರಾಜ್ಯದ ಜನರಿಗೆ ಬಿಗ್ ಶಾಕ್. ಮತ್ತೆ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ ಹೆಚ್ಚಳವಾಗುವ ಸಾಧ್ಯತೆ ಇದೆ.
ಮಾಡುದೆಲ್ಲಾ ಅನಾಚಾರ ಮನೆಮುಂದೆ ಬೃಂದಾವನ ಎನ್ನುವಂತೆ ಮಿಸ್ಟರ್ ಲಾಡ್ ಲಬಕ್ ದಾಸ್ ಸಂತೋಷ್ ಲಾಡ್ ಅವರು ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿ ಕಾರ್ಮಿಕ ಇಲಾಖೆ ಹೆಸರಲ್ಲಿ ಲೂಟಿಗೆ ವಾಮಮಾರ್ಗ ಹಿಡಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಸರ್ಕಾರ ಮತ್ತೊಮ್ಮೆ ಪೆಟ್ರೋಲ್, ಡಿಸೇಲ್ ಸೆಸ್ ಹೆಚ್ಚಳ ಮಾಡಬೇಕು ಎಂದು ಸಂತೋಷ್ ಲಾಡ್ ಅವರು ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದರೂ, ತನ್ನ ಖಜಾನೆ ತುಂಬಿಸಿಕೊಳ್ಳಬೇಕಷ್ಟೇ ಎನ್ನುವ ದುರಾಲೋಚನೆ ಕಾಂಗ್ರೆಸ್ ರಾಜ್ಯ ಸರ್ಕಾರದ್ದು ಎಂದು ಕಿಡಿಕಾರಿದೆ.


