Site icon Kannada News-suddikshana

ಅಕ್ಕಿನೇನಿ ಸೊಸೆ ಶೋಭಿತಾ ಧೂಳಿಪಾಲ ಟಾರ್ಗೆಟ್ ಆಗಿರುವುದೇಕೆ…?

SUDDIKSHANA KANNADA NEWS/ DAVANAGERE/ DATE:19-02-2025

ಅಕ್ಕಿನೇನಿ ಕುಟುಂಬದ ಸೊಸೆ ಶೋಭಿತಾ ಧೂಳಿಪಾಲ ಪದೇ ಪದೇ ಟಾರ್ಗೆಟ್ ಆಗುತ್ತಿದ್ದಾರೆ. ಶೋಭಿತಾ ಏನೇ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ನೆಟ್ಟಿಗರಿಂದ ಟೀಕೆಗೆ ಒಳಗಾಗುತ್ತಿದ್ದಾರೆ.

ನಟ ನಾಗಚೈತನ್ಯಗೆ ಸಮಂತಾ ಡಿವೋರ್ಸ್ ಕೊಟ್ಟ ಬಳಿಕ ಸಮಂತಾ ಪರ ಟ್ವೀಟ್ ಮಾಡುತ್ತಿದ್ದರೆ, ಶೋಭಿತಾ ಕಾಲೆಳೆಯುತ್ತಲೇ ಇದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಕ್ಕಿನೇನಿ ಕುಟುಂಬ ಕುಟುಂ ಭೇಟಿ ಮಾಡಿತ್ತು. ಆಗಲೂ ನಾಗಚೈತನ್ಯ ಪಕ್ಕದಲ್ಲಿ ಸಮಂತಾ ಇದ್ದರೆ ಚೆನ್ನಾಗಿತ್ತು, ಶೋಭಿತಾ ಚೆನ್ನಾಗಿ ಕಾಣುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ. ನಾಗಚೈತನ್ಯ ಜೊತೆ ಮದುವೆಯಾಗಿ ಎರಡು ತಿಂಗಳಾದರೂ ನೆಟ್ಟಿಗರ ಕಾಟ ತಪ್ಪಿಲ್ಲ.

ಶೋಭಿತಾ ಬಾಲಿವುಡ್‌ನಲ್ಲಿ ಸಮಂತಾಗಿಂತ ಹೆಚ್ಚು ಪ್ರಸಿದ್ಧರು. ಅಷ್ಟೇ ಅಲ್ಲ ಅವರು ಅತ್ಯಂತ ಸ್ಟೈಲಿಶ್ ನಟಿಯರಲ್ಲಿ ಒಬ್ಬರು. ಆದರೂ ಸೌತ್ ಸಿನಿ ಪ್ರೇಮಿಗಳಿಗೆ ಸಮಂತಾನೆ ಇಷ್ಟ. ಇತ್ತೀಚೆಗೆ ಶೋಭಿತಾ ಮತ್ತೊಮ್ಮೆ ನೆಟಿಜನ್‌ಗಳ ಕೆಂಗಣ್ಣಿಗೆ
ಗುರಿಯಾಗಿದ್ದಾರೆ. ಇತ್ತೀಚೆಗೆ, ಅಕ್ಕಿನೇನಿ ಕುಟುಂಬವು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್ ಭವನದಲ್ಲಿ ಭೇಟಿಯಾಯಿತು. ಈ ಸಂದರ್ಭದಲ್ಲಿ ಶೋಭಿತಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನರೇಂದ್ರ ಮೋದಿ ಅವರಿಗೆ ಕೊಂಡಪಲ್ಲಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು. ಶೋಭಿತಾ ಅವರು ಬಾಲ್ಯದಲ್ಲಿ ಆಂಧ್ರ ಪ್ರದೇಶದ ತೆನಾಲಿಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಬೆಳೆದು ಕೊಂಡಪಲ್ಲಿ ಗೊಂಬೆಗಳೊಂದಿಗೆ ಆಟವಾಡುತ್ತಿದ್ದೆ ಎಂದು ಹೇಳಿದರು. ಇದಕ್ಕಾಗಿ ನೆಟ್ಟಿಗರು ಅವರನ್ನು ಗುರಿಯಾಗಿಸಿಕೊಳ್ಳಲು ಪ್ರಾರಂಭಿಸಿದರು.

ಮತ್ತೊಂದೆಡೆ ನಾಗ ಚೈತನ್ಯ ಅವರ ಥಂಡೇಲ್ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಗೆಲುವಿಗೆ ಶೋಭಿತಾ ಕಾಲ್ಗುಣ ಎಂದರೆ ಮತ್ತೆ ಕೆಲವರಂತೂ ಸಾಯಿಪಲ್ಲವಿಯಿಂದಲಾ ಚಿತ್ರ ಸಕ್ಸಸ್ ಆಗಿದೆ ಎಂದು ಹೇಳಿದ್ದಾರೆ. ಯಾರು ಏನೇ ಹೇಳಿದರೂ ಸಮಂತಾ ಅವರೇ ರಾಣಿ. “ಪ್ರಧಾನಿ ಮೋದಿ ಸಮಂತಾ ಎಲ್ಲಿ ಎಂದು ಕೇಳಲಿಲ್ಲವೇ?” “ನಿಮ್ಮ ಪಕ್ಕದಲ್ಲಿ ಸೋಭಿತಾ ಚೆನ್ನಾಗಿಲ್ಲ. ಸಮಂತಾ ಮಾತ್ರ ಸೂಪರ್ ಜೋಡಿ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಶೋಭಿತಾ ಪ್ರತಿದಿನ ಈ ಟ್ರೋಲ್‌ಗಳಿಂದ ಬೇಸತ್ತಿದ್ದಾರೆ. ಬಾಲಿವುಡ್ ನಿಂದ ಬಂದಿರುವ ಅವರು ಈಗಷ್ಟೇ ಅಕ್ಕಿನೇನಿ ಕುಟುಂಬದಲ್ಲಿ ಅಡ್ಜಸ್ಟ್ ಆಗುತ್ತಿದ್ದಾರೆ. ಶೋಭಿತಾ ಏನೇ ಪೋಸ್ಟ್ ಮಾಡಿದರೂ ಟ್ರೋಲ್ ಆಗುತ್ತಿದೆ. ಇದು ಅವರಿಗೆ ಇರಿಸು
ಮುರಿಸು ತರುತ್ತಿದ್ದರೂ ಮುಂದೆ ಹೋಗುತ್ತಿದ್ದಾರೆ.

Exit mobile version