ಬೆಂಗಳೂರು: ಭಾರತದ ಗೃಹ ಸಚಿವರು ಅಥವಾ ವಿದೇಶಾಂಗ ಸಚಿವರಿಗೆ ನೀಡಲಾಗಿರುವ ಶಿಷ್ಟಾಚಾರದಂತೆಯೇ, ನಕಲಿ ಎನ್ ಜಿಒ ಅಥವಾ “ವ್ಯಕ್ತಿಗಳ ಸಂಘಟನೆ”ಯ ಮುಖ್ಯಸ್ಥರು ಕೂಡ ಸುಧಾರಿತ ಭದ್ರತಾ ಸಂಪರ್ಕ ರಕ್ಷಣೆಯನ್ನು ಪಡೆಯುತ್ತಿರುವುದು ಏಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿಕಾರಿದ್ದಾರೆ.
ಭಾಗವತ್ ಚುನಾಯಿತ ಸಾರ್ವಜನಿಕ ಪ್ರತಿನಿಧಿಯೂ ಅಲ್ಲ ಅಥವಾ ಸಾರ್ವಜನಿಕ ಸೇವಕರೂ ಅಲ್ಲ ಮತ್ತು ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ.ಪಾರದರ್ಶಕತೆರಹಿತ ಕಾರ್ಯನಿರ್ವಹಣೆ ಹಾಗೂ ತೆರಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸೇರಿದಂತೆ ಸಾಂವಿಧಾನಿಕ ವಿರೋಧಿ ಚಟುವಟಿಕೆಗಳಲ್ಲಿ ಆರ್‌ಎಸ್‌ಎಸ್ ಭಾಗಿಯಾಗಿದೆ ಎನ್ನುವುದು ವಾಸ್ತವ ಎಂದು ಕಿಡಿಕಾರಿದ್ದಾರೆ.
ಹಾಗಾದರೆ, ಎನ್‌ಜಿಒ ಮುಖ್ಯಸ್ಥರ ಭದ್ರತೆಗಾಗಿ ತೆರಿಗೆದಾರರ ಹಣವನ್ನು ಇಷ್ಟು ಪ್ರಮಾಣದಲ್ಲಿ ಯಾವ ಆಧಾರದ ಮೇಲೆ ಖರ್ಚು ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಕಾರ್ಪೊರೇಟ್‌ಗಳು ಮತ್ತು ಖಾಸಗಿ ವಿವಿಐಪಿಗಳಿಗೆ ಇರುವ ನಿಯಮದಂತೆ, ಈ ಭದ್ರತಾ ವ್ಯವಸ್ಥೆಗಾಗಿ ಗೃಹ ಸಚಿವಾಲಯಕ್ಕೆ ಆರ್‌ಎಸ್‌ಎಸ್ ಹಣ ಮರುಪಾವತಿ ಮಾಡುತ್ತದೆಯೇ? ಮಾನ್ಯ ಅಮಿತ್ ಶಾ ಅವರೇ ಈ ಬಗ್ಗೆ ನಮಗೆ ತಿಳಿಸಬೇಕು. ಏನೇ ಆದರೂ, ಸ್ವಯಂ ಘೋಷಿತ “ಸಾಂಸ್ಕೃತಿಕ ಸಂಸ್ಥೆ”ಯ ಮುಖ್ಯಸ್ಥರಿಗೆ ಡಜನ್‌ಗಟ್ಟಲೆ ಕಮಾಂಡೋಗಳು ಮತ್ತು 30 ಕಾರುಗಳ ಬೆಂಗಾವಲಿನ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.





Leave a comment