Home ಕ್ರೈಂ ನ್ಯೂಸ್ EXCLUSIVE: 250 ಸಿಸಿಟಿವಿಗಳ ಪರಿಶೀಲನೆ, ಮಧ್ಯಪ್ರದೇಶಕ್ಕೆ ಮಾರುವೇಷದಲ್ಲೋದ ದಾವಣಗೆರೆ ಪೊಲೀಸರು: 51. 49 ಲಕ್ಷ ರೂ. ಬಂಗಾರದ ಒಡವೆಗಳ ವಶಪಡಿಸಿಕೊಂಡಿದ್ದೇಗೆ?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

EXCLUSIVE: 250 ಸಿಸಿಟಿವಿಗಳ ಪರಿಶೀಲನೆ, ಮಧ್ಯಪ್ರದೇಶಕ್ಕೆ ಮಾರುವೇಷದಲ್ಲೋದ ದಾವಣಗೆರೆ ಪೊಲೀಸರು: 51. 49 ಲಕ್ಷ ರೂ. ಬಂಗಾರದ ಒಡವೆಗಳ ವಶಪಡಿಸಿಕೊಂಡಿದ್ದೇಗೆ?

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:10_12_2025

ದಾವಣಗೆರೆ: 250 ಸಿಸಿಟಿವಿಗಳ ಪರಿಶೀಲನೆ. ಸವಾಲಾಗಿದ್ದ ಕೇಸ್. ಬರೋಬ್ಬರಿ 535 ಗ್ರಾಂ ಬಂಗಾರದ ಆಭರಣಗಳು. ಒಟ್ಟು 67 ಲಕ್ಷದ 48 ಸಾವಿರ ರೂಪಾಯಿ ಮೌಲ್ಯ. ಕದ್ದವರು ನಮ್ಮ ರಾಜ್ಯದವರಲ್ಲ, ಮಧ್ಯಪ್ರದೇಶ ರಾಜ್ಯದವರು. ಅಲ್ಲಿಗೆ ಹೋಗೋದು ಅಷ್ಚು ಸುಲಭವಲ್ಲ. ಯಾಕಂದರೆ ಮಾಹಿತಿಯೇ ಸರಿಯಾಗಿ ಸಿಗದು. ಅಂಥಹುದರಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ನಿಜಕ್ಕೂ ರೋಚಕ, ರಣರೋಚಕ.

READ ALSO THIS STROY: ದಾವಣಗೆರೆ ಅಪೂರ್ವ ರೆಸಾರ್ಟ್ ಮದುವೆ ಈವೆಂಟ್ ನಲ್ಲಿ ಕದ್ದಿದ್ದ ಅರ್ಧಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶ

ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಮದುವೆಗೆ ಬಂದಿದ್ದ ಕುಟುಂಬವು 67.48 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಒಡವೆಗಳನ್ನು ಕಳೆದುಕೊಂಡಿತ್ತು. ಅಂದ ಹಾಗೆ ಮದುವೆಗೆ ಬಂದಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ಕದ್ದೊಯ್ದಿದ್ದರು. ಆರೋಪಿಗಳ ಗುರುತು ಸಿಗುವಂತೆ ಮಾಡಿದ್ದು ಮದುವೆಯಲ್ಲಿ ಚಿತ್ರೀಕರಿಸಿದ್ದ ವಿಡಿಯೋ.

ವಿಡಿಯೋ ಪರಿಶೀಲಿಸಿದಾಗ ಪೊಲೀಸರಿಗೆ ಒಬ್ಬಾತನ ಮಾಹಿತಿ ಸಿಕ್ಕಿತ್ತು. ಆದ್ರೆ, ಈ ಕಳ್ಳರು ಅಂತಿಥವರಲ್ಲ. ಕೈಗೆ ಸಿಗುವುದೇ ಕಷ್ಟ. ಅಂತಹುದರಲ್ಲಿ ಕದ್ದು ಸೀದಾ ಮಧ್ಯಪ್ರದೇಶಕ್ಕೆ ಹೋಗಿಬಿಟ್ಟಿದ್ದಾರೆ. ಈ ಕಳ್ಳರ ಜಾಡು ಹಿಡಿದು ಹೋದ ಪೊಲೀಸರ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ.

ದಾವಣಗೆರೆ ಗ್ರಾಮಾಂತರ ಪೊಲೀಸರು ಆರೋಪಿತರ ಪತ್ತೆ ಬಗ್ಗೆ ವಿವಿಧ ಆಯಾಮಗಳಿಂದ ಮತ್ತು ಸುಮಾರು 250 ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿದ್ದಾರೆ. ಈ ವೇಳೆ ಮಧ್ಯಪ್ರದೇಶ ರಾಜ್ಯದ ರಾಜ್‌ಗಡ್ ಜಿಲ್ಲೆಯ ನರಸಿಂಗ್ ತಾಲ್ಲೂಕಿನ ಗುಲ್‌ಖೇಡಾ ಗ್ರಾಮದವರೆಂಬ ಮಾಹಿತಿ ಸಿಕ್ಕಿದೆ.

ನವೆಂಬರ್ 24ರಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ. ಟಿ. ಅಣ್ಣಯ್ಯ, ಪಿಎಸ್ಐಗಳಾದ ಪ್ರಭು ಡಿ. ಕೆಳಗಿನಮನಿ, ಅಬ್ದುಲ್ ಖಾದರ್ ಜಿಲಾನಿ, ಜೋವಿತ್ ರಾಜ್, ಠಾಣಾ ಸಿಬ್ಬಂದಿಯ ಮಾರುತಿ, ಮಹಮ್ಮದ್ ಯುಸೂಫ್ ಅತ್ತರ್, ಸಿ. ಹನುಮಂತಪ್ಪ, ಮತ್ತು ಉಪವಿಭಾಗದ ಅಪರಾಧ ಸಿಬ್ಬಂದಿಗಳಾದ ಗಿರೀಶ್‌ಗೌಡ ಮಲೇಬೆನ್ನೂರು ಪೊಲೀಸ್ ಠಾಣೆ, ಪ್ರವೀಣ್‌ಕುಮಾರ ಕುರಿ ಬಿಳಿಚೋಡು ಪೊಲೀಸ್ ಠಾಣೆ ಅವರೊಂದಿಗೆ ಖಾಸಗಿ ವಾಹನದಲ್ಲಿ ಮಧ್ಯಪ್ರದೇಶ ರಾಜ್ಯದ ಪಚೋರಿ ನಗರಕ್ಕೆ ಹೋಗಿ ಸುಮಾರು 14 ದಿನಗಳ ಕಾಲ ಮಾರುವೇಷದಲ್ಲಿ ಆರೋಪಿತರ ಇರುವಿಕೆ ಮಾಹಿತಿ ಸಂಗ್ರಹಿಸಿದೆ.

ಪೊಲೀಸರ ಸಹಾಯದಿಂದ ಮತ್ತು ಮಾಹಿತಿದಾರರ ಸಹಾಯದಿಂದ ಆರೋಪಿತರ ಮನೆಯ ಬಳಿ ಆರೋಪಿಗಳನ್ನು ಹಿಡಿಯಲು ಹೋಗಿದ್ದಾಗ, ಆರೋಪಿಗಳಾದ ಕರಣ್‌ವರ್ಮಾ ಅಲಿಯಾಸ್ ಕರಣ್ ಸಿಸೊಡಿಯಾ, ವಿನಿತ್ ಸಿಸೊಡಿಯಾ ತಪ್ಪಿಸಿಕೊಂಡು ಹೋಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *