Site icon Kannada News-suddikshana

ಸಿರಿಗೆರೆ ಶ್ರೀ ಡಾ. ಶಿವಮೂರ್ತಿ ಸ್ವಾಮೀಜಿ ಭೇಟಿ ಮಾಡಿದ್ಯಾಕೆ ಬಿ. ವೈ. ವಿಜಯೇಂದ್ರ?

ಶಿವಮೂರ್ತಿ ಸ್ವಾಮೀಜಿ

SUDDIKSHANA KANNADA NEWS/ DAVANAGERE/ DATE:26_07_2025

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಸಿರಿಗೆರೆಯ ತರಳಬಾಳು ಪೀಠಾಧಿಪತಿ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ದಿವ್ಯಾಶೀರ್ವಾದ ಪಡೆದರು.

ಸಮಾಜದ ಯುವ ಮುಖಂಡರು, ಪೀಠದ ಬಗ್ಗೆ ಅಪಾರ ಗೌರವ ಹೊಂದಿರುವ ಬಿ. ವೈ. ವಿಜಯೇಂದ್ರ ಅವರನ್ನು ಆಶೀರ್ವದಿಸಿದ ಶ್ರೀಗಳು ಕುಶಲೋಪರಿ ವಿಚಾರಿಸಿದರು. ಸ್ವಲ್ಪ ಹೊತ್ತು ವಿಜಯೇಂದ್ರ ಅವರ ಜೊತೆ ಶ್ರೀಗಳು
ಮಾತುಕತೆ ನಡೆಸಿದರು.

READ ALSO THIS STORY: EXCLUSIVE: ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: MDMA ಮಾರಾಟ ಮಾಡ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ ಐವರ ಬಂಧನ!

ಅಲೌಕಿಕ ಜ್ಞಾನ ಜ್ಯೋತಿಯನ್ನು ಪಸರಿಸುತ್ತಾ, ಸದೃಢ ಹಾಗೂ ಸ್ವಾವಲಂಭಿ ಸಮಾಜ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸುತ್ತಾ ಸಾಗುತ್ತಿರುವ ಪರಮಪೂಜ್ಯರ ಅಮೂಲ್ಯ ಮಾರ್ಗದರ್ಶನ ಪಡೆದೆ ಎಂದು ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

Exit mobile version