ದಾವಣಗೆರೆ: ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುವ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ.
ಒಟ್ಟು ಗುರುತಿಸಲಾದ ಬ್ಲಾಕ್ ಸ್ಪಾಟ್‍ಗಳು 32, ಸರಿಪಡಿಸಲಾದ ಸ್ಥಳಗಳು 13. ಇನ್ನೂ ಅಪಾಯಕಾರಿಯಾಗಿರುವ ಸ್ಥಳಗಳು 19 ಎಂದು ಗುರುತಿಸಿದ್ದು 2026 ರಲ್ಲಿ ಹೊಸದಾಗಿ 8 ಸ್ಥಳಗಳನ್ನು ಗುರುತಿಸಲಾಗಿದೆ.
ಪ್ರಮುಖ ಅಪಾಯಕಾರಿ ಸ್ಥಳಗಳು:
ಎನ್.ಹೆಚ್ 48 ರ ಬಾಡಾ ಕ್ರಾಸ್, ಎಸ್.ಎಸ್. ಆಸ್ಪತ್ರೆ ಬ್ರಿಡ್ಜ್, ಚೆನ್ನಗಿರಿಯ ನುಗ್ಗೀಹಳ್ಳಿ ಕ್ರಾಸ್ ಮತ್ತು ಜಗಳೂರಿನ ದೊಣ್ಣೆಹಳ್ಳಿ ಗ್ರಾಮದ ಬಳಿ ಹೆಚ್ಚು ಅಪಘಾತಗಳು ವರದಿಯಾಗಿವೆ. ಅಪಘಾತಗಳ ಸಂಖ್ಯೆಯಲ್ಲಿ ದಾವಣಗೆರೆ ಗ್ರಾಮಾಂತರ ಮತ್ತು ಚನ್ನಗಿರಿ ಉಪವಿಭಾಗಗಳು ಮೊದಲ ಸ್ಥಾನದಲ್ಲಿವೆ. 2025ರಲ್ಲಿ ದಾವಣಗೆರೆ ಗ್ರಾಮಾಂತರದಲ್ಲಿ 135 ಮತ್ತು ಚನ್ನಗಿರಿಯಲ್ಲಿ 124 ಪ್ರಾಣಾಪಾಯ ಸಂಭವಿಸಿದ ಅಪಘಾತಗಳು ದಾಖಲಾಗಿವೆ.
ಪೇಯ್ಡ್ ಆಟೋ ನಿಲ್ದಾಣಗಳು:
ನಗರದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ವ್ಯವಸ್ಥೆ ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನು ನಾಲ್ಕು ಕಡೆಗಳಲ್ಲಿ ಇಂತಹ ನಿಲ್ದಾಣಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ವಿದ್ಯುತ್ ಚಾಲಿತ ಬಸ್ಸುಗಳು ದಾವಣಗೆರೆಗೆ ಸುಮಾರು 50 ರಿಂದ 100 ಹೊಸ ಎಲೆಕ್ಟ್ರಿಕಲ್ ಬಸ್ಸುಗಳು ಬರಲಿದ್ದು, ಇವುಗಳನ್ನು ನಗರ ಮತ್ತು ಹರಿಹರದ ನಡುವಿನ ಸಂಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು.




Leave a comment