Site icon Kannada News-suddikshana

BBK: ಕನ್ನಡದ ಬಿಗ್ ಬಾಸ್ ಶೋ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಕಿರುತರೆಯಲ್ಲಿ ಅತಿಹೆಚ್ಚು ಜನಪ್ರಿಯವಾದ ಶೋ ಮತ್ತು ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಕನ್ನಡದ ಬಿಗ್ ಬಾಸ್, ಅದನ್ನು ಸತತವಾಗಿ 10 ವರ್ಷಗಳ ಕಾಲ ಮುನ್ನಡೆಸಿಕೊಂಡು ಅದಕ್ಕೆ ಇನ್ನಷ್ಟು ಮೆರಗು ತುಂಬಿದ್ದು ಬಾದ್ ಷಾ ಕಿಚ್ಚ ಸುದೀಪ ಎಂದರೆ ತಪ್ಪಾಗಲಾರದು. ಆದರೆ ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಈಗಾಗಲೇ ಅವರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.ಇದೀಗ ಕನ್ನಡದ ಬಿಗ್ ಬಾಸ್ ಶೋ ಬಗ್ಗೆ ಕಿಚ್ಚ ಕಿವಿಮಾತುಗಳನ್ನಾಡಿದ್ದಾರೆ.

ಕಿಚ್ಚ ಸುದೀಪ್ ರವರು ತಮ್ಮ ಮ್ಯಾಕ್ಸ್ ಸಿನಿಮಾದ ಪ್ರಮೋಶನ್ ಅಲ್ಲಿ ತೊಡಗಿಸಿಕೊಂಡಿದ್ದಾರೆ, ಪ್ರೀ ರಿಲೀಸ್ ಇವೆಂಟ್ ಗು ಮುನ್ನ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್ ರವರು ಕನ್ನಡದ ಬಿಗ್ ಬಾಸ್ ಶೋ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಕಿಚ್ಚ ಅವರು ಬಿಗ್ ಬಾಸ್ ಬಗ್ಗೆ ನನಗೆ ಅನಿಸಿದ್ದನ್ನು ನಾನು ಹೇಳುತ್ತೇನೆ, ಇನ್ನೂ ಒಂಚೂರು ಇಂಪ್ರೂಮೆಂಟ್ ಆಗಬೇಕಿದೆ, ಏಕೆಂದರೆ ಈ ಕಡೆ ಹಿಂದಿ,ತೆಲುಗು,ತಮಿಳ್ ಹೀಗೆ ಬೇರೆ ಭಾಷೆಯ ಶೋಗಳನ್ನು ನೋಡುವಾಗ ಕನ್ನಡದ ಬಿಗ್ ಬಾಸ್ ಅಲ್ಲಿ ಕೊಂಚ ಕೊರತೆ ಕಾಣುತ್ತದೆ ಎಂದು ಹೇಳಿದರು.

ನಾನು ಬಿಗ್ ಬಾಸ್ ವೀಕ್ಷಕರು ಮತ್ತು ಟಿ ಅರ್ ಪಿ ವಿಚಾರದಲ್ಲಿ ಹೇಳುತ್ತಿಲ್ಲ, ಕನ್ನಡದ ಬಿಗ್ ಬಾಸ್ ಟೀಂ ನಲ್ಲಿ ಯಾರಿದ್ದಾರೋ ಅವರು ಸ್ವಲ್ಪ ಬೇರೆ ರೀತಿಯಲ್ಲಿ ಅಲೋಚಿಸಬೇಕು ಎಂದು ನನಗೆ ಅನಿಸಿದ್ದು, ಬಿಗ್ ಬಾಸ್ ಶೋ ಇನ್ನೂ ಹೆಚ್ಚು ಚೆನ್ನಾಗಿ ಆಗಬೇಕು ಎಂಬುದೇ ನನ್ನ ಅಭಿಪ್ರಾಯ ಎಂದು ಹೇಳಿದರು.

Exit mobile version