Site icon Kannada News-suddikshana

ತಾಯಿ ಬಗ್ಗೆ ಕೆಟ್ಟದಾಗಿ ನಿಂದಿಸುತ್ತಿದ್ದ ಗುರುಪ್ರಸಾದ್ ಗೆ ಬುದ್ದಿವಾದ ಹೇಳಿದ್ದೆ, ಬಾಯಲ್ಲಿ ಹುಳ ಬೀಳುತ್ತೆ ಎಂದಿದ್ದೆ: ನಟ ಜಗ್ಗೇಶ್ ಹೇಳಿದ ಕಥೆ ಏನು…?

SUDDIKSHANA KANNADA NEWS/ DAVANAGERE/ DATE:03-11-2024

ಬೆಂಗಳೂರು: ತನ್ನ ತಾಯಿ ಬಗ್ಗೆಯೇ ಕೆಟ್ಟದಾಗಿ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ನಿಂದಿಸುತ್ತಿದ್ದ. ಈ ರೀತಿ ಮಾತನಾಡಬೇಡ ಎಂದು ನಾನೇ ಎಷ್ಟೋ ಬಾರಿ ಬುದ್ದಿವಾದ ಹೇಳಿದ್ದೆ ಎಂದು ನವರಸ ನಾಯಕ ಜಗ್ಗೇಶ್ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಎಷ್ಟೋ ಬಾರಿ ಹೇಳಿದ್ದೆ. ಹೆತ್ತ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡ, ನಿನ್ನ ಬಾಯಲ್ಲಿ ಹುಳ ಬೀಳುತ್ತದೆ ಎಂದಿದ್ದೆ. ಈ ರೀತಿಯಾಗಿ ಮಾತನಾಡಬೇಡ ಎಂದು
ನಾನೇ ಹೇಳಿದ್ದೆ ಎಂದರು.

ಗುರುಪ್ರಸಾದ್ ಸಾವಿರ ಬಾರಿ ನನ್ನ ಬಳಿ ಹೇಳಿದ್ದ, ನಾನು ಸಾಯುತ್ತೇನೆ. ಬದುಕುವುದಿಲ್ಲ ಎಂದು. ಅದರಲ್ಲಿ ದೇವರು, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಬೇಡ. ದೇವರು ಮೆಚ್ಚುವುದಿಲ್ಲ. ಯಾವುದೇ ಧರ್ಮ, ಜಾತಿ, ಮಠ, ಗುರುಗಳು, ಸ್ವಾಮೀಜಿಗಳ ಬಗ್ಗೆ ಕೆಟ್ಟದಾಗಿ ಚಿತ್ರಿಸಬೇಡ, ಅವಹೇಳನ ಮಾಡಬೇಡ ಎಂದಿದ್ದೆ. ಆದರೂ ಕೇಳುತ್ತಿರಲಿಲ್ಲ. ನಾನು ಹೇಳಿದ್ದೆ ಸರಿ ಎಂಬಂತೆ ವರ್ತನೆ ಮಾಡುತ್ತಿದ್ದ ಎಂದು ಜಗ್ಗೇಶ್ ಹೇಳಿದ್ದಾರೆ.

ವಿಪರೀತ ಕುಡಿತದ ಚಟ ಹೊಂದಿದ್ದ ಗುರುಪ್ರಸಾದ್ ಹೆಚ್ಚಾಗಿ ಹೊಟೇಲ್ ನಲ್ಲಿ ವಾಸ ಮಾಡುತ್ತಿದ್ದರು. ಬಂದ ಹಣವೆಲ್ಲವನ್ನೂ ಕುಡಿತಕ್ಕೆ ಬಳಸುತ್ತಿದ್ದರು. ಕೆಟ್ಟ ಹವ್ಯಾಸ, ಗುಣಗಳೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಜಗ್ಗೇಶ್ ಮಾಹಿತಿ ನೀಡಿದರು.

Exit mobile version