Site icon Kannada News-suddikshana

ಚನ್ನಗಿರಿಯಲ್ಲಿ ಪತ್ನಿ ಮೂಗು ಕಚ್ಚಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಗಾಯಗೊಂಡ ವಿದ್ಯಾ ಹೇಳಿದ್ದೇನು..?

ಚನ್ನಗಿರಿ

SUDDIKSHANA KANNADA NEWS/ DAVANAGERE/ DATE_11-07_2025

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಡರಘಟ್ಟ ಗ್ರಾಮದಲ್ಲಿ ಪತಿಯಿಂದ ಮೂಗು ಕಚ್ಚಿಸಿಕೊಂಡ ಪತ್ನಿ ವಿದ್ಯಾ ಕಾರಣ ಬಿಚ್ಚಿಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: ಚನ್ನಗಿರಿಯಲ್ಲಿ ಪತ್ನಿ ಮೂಗನ್ನೇ ಕಚ್ಚಿದ ಪತಿ: ಮುಂದೇನಾಯ್ತು…?

ಕಳೆದ ಮೂರು ದಿನಗಳ ಹಿಂದೆ ನಡೆದ ಈ ವಿಲಕ್ಷಣ ಘಟನೆ ಸಾಕಷ್ಟು ಸುದ್ದಿ ಮಾಡಿದೆ. ಇನ್ನು ವಿದ್ಯಾ ಅವರು ಪತ್ನಿ ಮೂಗು ಕಚ್ಚಿದ್ದು ಯಾಕೆ ಎಂಬ ಕುರಿತಂತೆ ಮಾಹಿತಿ ನೀಡಿದ್ದಾರೆ.

ಸ್ವ ಸಹಾಯ ಸಂಘದಲ್ಲಿ 2 ಲಕ್ಷ ರೂಪಾಯಿಯನ್ನು ವಿದ್ಯಾ ಪಡೆದಿದ್ದರು. ಈ ಹಣವನ್ನು ವಿಜಯ್ ಬಳಸಿಕೊಂಡಿದ್ದ. ಮಾತ್ರವಲ್ಲ, ಕಂತು ಪಾವತಿ ಮಾಡದಿರುವುದಕ್ಕೆ ಸ್ವಸಹಾಯ ಸಂಘದವರು ವಿಜಯ್ ಗೆ ಫೋನ್ ಮಾಡಿ ಹಣ ಪಾವತಿ ಮಾಡಿಲ್ಲ ಎಂದಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ವಿಜಯ್ ಪಾನಮತ್ತನಾಗಿ ಮನೆಗೆ ಬಂದಿದ್ದ. ಈ ವೇಳೆ ವಿದ್ಯಾ ಜೊತೆ ಜಗಳ ಮಾಡುತ್ತಿದ್ದ. ಇದು ವಿದ್ಯಾಳಿಗೂ ಕಿರಿಕಿರಿ ತಂದಿತ್ತು.

ಸ್ವ ಸಹಾಯ ಸಂಘದ ಸಾಲದ ಎರಡು ಕಂತು ಪಾವತಿಸಿರಲಿಲ್ಲ. ವಿದ್ಯಾಳ ಜೊತೆ ಮನೆಗೆ ಬಂದು ಗಲಾಟೆ ಮಾಡಿದ್ದ ವಿಜಯ್ ಇದ್ದಕ್ಕಿದ್ದಂತೆ ಮೂಗು ಕಚ್ಚಿದ್ದ. ಇದರಿಂದ ಗಾಯಗೊಂಡಿದ್ದ ವಿದ್ಯಾಳನ್ನು ಸ್ಥಳೀಯರು ಜಗಳ ಬಿಡಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.

ವಿದ್ಯಾ ಮೂಗಿನ ಮುಂಭಾಗ ಸಂಪೂರ್ಣ ಕಟ್ ಆಗಿದ್ದು, ವಿದ್ಯಾ ಅವರ ಪತಿ ವಿಜಯ್ ಎಂಬುವನಿಂದ ಕೃತ್ಯಎಸಗಿದ್ದ. ಮಾತ್ರವಲ್ಲ, ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಎಫ್ಐಆರ್ ದಾಖಲಿಸಿಕೊಂಡಿರುವ ಚನ್ನಗಿರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version