Home ಕ್ರೈಂ ನ್ಯೂಸ್ ಸಾಕು ನಾಯಿ ಹೊಡೆದಿದ್ದಕ್ಕೆ ರಣಾಂಗಣ: ಮದುವೆ ರದ್ದು ಮಾಡಿದ ವಧು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿ

ಸಾಕು ನಾಯಿ ಹೊಡೆದಿದ್ದಕ್ಕೆ ರಣಾಂಗಣ: ಮದುವೆ ರದ್ದು ಮಾಡಿದ ವಧು!

Share
ಮದುವೆ
Share

ಫತೇಪುರ್ (ಉತ್ತರ ಪ್ರದೇಶ): ಮದುವೆ ಮನೆ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಇಲ್ಲೊಂದು ಮದುವೆಯಲ್ಲಿ ವಧುವಿನ ಸಾಕು ನಾಯಿಯ ವಿಚಾರವಾಗಿ ನಡೆದ ಜಗಳ ರಣರಂಗಕ್ಕೆ ಸಾಕ್ಷಿಯಾಗಿದೆ.

ತನ್ನ ಅಚ್ಚುಮೆಚ್ಚಿನ ನಾಯಿಯನ್ನು ವರನ ಕಡೆಯವರು ಹೊಡೆದಿದ್ದರಿಂದ ಕೋಪಗೊಂಡ ವಧು, ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಖಾಗಾ ಎಂಬಲ್ಲಿ ನಡೆದಿದೆ.

ಘಟನೆಯ ವಿವರ:

ಸುಮಿತ್ ಮತ್ತು ತನು ಎಂಬುವವರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಈ ಜೋಡಿ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಬಳಿಕ ಎರಡೂ ಕುಟುಂಬದವರು ಒಪ್ಪಿ ಫೆಬ್ರವರಿ 18ರಂದು ಅದ್ಧೂರಿಯಾಗಿ ಮದುವೆ ಸಮಾರಂಭ ಏರ್ಪಡಿಸಿದ್ದರು. ಪ್ರತಿಯೊಂದು ವಿಧಿವಿಧಾನಗಳು ಶಾಂತಿಯುತವಾಗಿ ನಡೆಯುತ್ತಿದ್ದವು.

ಆದರೆ, ಬೆಳಗಿನ ಜಾವ ಸುಮಾರು 4 ಗಂಟೆಯ ಸುಮಾರಿಗೆ ವಧುವಿನ ಸಾಕು ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಇದರಿಂದ ಕೆರಳಿದ ವರನ ಕಡೆಯ ಯುವಕನೊಬ್ಬ ಆ ನಾಯಿಯನ್ನು ಮನಬಂದಂತೆ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ವಧುವಿನ ಕುಟುಂಬದವರ ಮೇಲೆ ವರನ ಕಡೆಯವರು ಕುರ್ಚಿ ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಘರ್ಷದಲ್ಲಿ ವಧುವಿನ ಕಡೆಯ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಧುವಿನ ದಿಟ್ಟ ನಿರ್ಧಾರ:

ಮನೆಯವರು ಹಾಗೂ ಸಾಕು ನಾಯಿಯ ಮೇಲಿನ ದೌರ್ಜನ್ಯವನ್ನು ಕಂಡ ವಧು ತಕ್ಷಣವೇ ಮದುವೆಯನ್ನು ನಿಲ್ಲಿಸುವುದಾಗಿ ಘೋಷಿಸಿದಳು. ಪೊಲೀಸರು ಮಧ್ಯಪ್ರವೇಶಿಸಿ ಸಂಧಾನಕ್ಕೆ ಯತ್ನಿಸಿದರೂ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಂತಿಮವಾಗಿ ಎರಡೂ ಕುಟುಂಬಗಳು ಪರಸ್ಪರ ನೀಡಿದ್ದ ಉಡುಗೊರೆಗಳನ್ನು ಮರಳಿಸಿ, ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿವೆ.

Share

Leave a comment

Leave a Reply

Your email address will not be published. Required fields are marked *