ದಾವಣಗೆರೆ:ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಬಳಿಯ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪ ಹಚ್ಚಲು ಅವಕಾಶ ನೀಡುವ ಆದೇಶವನ್ನು ಮದ್ರಾಸ್ ಹೈಕೋರ್ಟ್ ನೀಡಿದ್ದು, ಇದನ್ನು ಗೌರವಿಸುತ್ತೇವೆ. ದೀಪ ಹಚ್ಚುವಂತೆ ಈ ಹಿಂದೆ ತೀರ್ಪು ನೀಡಿದ್ದ ಜಡ್ ವಜಾಕ್ಕೆ ಆಗ್ರಹಿಸಿ ರಾಜ್ಯದ ಮೂವರು ಕಾಂಗ್ರೆಸ್ ಸಂಸದರು ಸಹಿ ಹಾಕಿದ್ದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಮುಂದೆ ಹೋಗಿದೆ. ನಾನು ಸಹಿ ಹಾಕಿದ್ದರ ಬಗ್ಗೆ ಏನನ್ನೂ ಹೇಳಲ್ಲ ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.
READ ALSO THIS STORY: ಕೆರೆಯಲ್ಲಿ ಬೋಟ್ ರೈಡಿಂಗ್ ನಲ್ಲಿ ಮಹಿಳೆಯರೊಂದಿಗೆ ಸಂಸದೆ ಸವಾರಿ: ಈ ಕ್ಷಣ ಅವಿಸ್ಮರಣೀಯ ಎಂದ್ರು ಡಾ. ಪ್ರಭಾ ಮಲ್ಲಿಕಾರ್ಜುನ್
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಡ್ಜ್ ವಿರುದ್ಧದ ಮಹಾಭಿಯೋಗಕ್ಕೆ ನಾನು ಸಹಿ ಹಾಕಿದ್ದೇನೆಯೋ ಅಥವಾ ಇಲ್ಲವೋ ನಿಮಗೆ ಏನು ಅನಿಸುತ್ತದೆ ಎಂದು ಪ್ರಶ್ನಿಸಿದರು.
ಈ ಹಿಂದೆ ಜಡ್ಜ್ ವಜಾಕ್ಕೆ ಆಗ್ರಹಿಸಿ ಸಹಿ ಹಾಕಿರುವ ವಿಚಾರ ಕುರಿತಂತೆ ರಾಜ್ಯದ ಮೂವರು ಸಂಸದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಲಾಗುತ್ತಿದೆ. ಒಂದು ಪಾರ್ಟಿ ನಿಲುವು ಇರುತ್ತದೆ. ನಾವು ಒಂದು ಪಕ್ಷಕ್ಕೆ ಬದ್ಧರಾಗಿರುತ್ತೇವೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಮ್ಮದು ಇಂಡಿಯಾ ಒಕ್ಕೂಟ ಇದೆ. ಎಲ್ಲಾ ಪಕ್ಷಗಳಲ್ಲಿಯೂ ಬೇರೆ ಬೇರೆ ಧರ್ಮದವರು ಇರುತ್ತಾರೆ. ನಾವು ಯಾರಿಗೂ ಕೂಡ ತೊಂದರೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ತಮಿಳುನಾಡು ಹೈಕೋರ್ಟ್ ಈಗಾಗಲೇ ಆದೇಶ ನೀಡಿದ್ದು, ದೀಪ ಹಚ್ಚಬಹುದು ಎಂದೇಳಿದೆ. ನ್ಯಾಯಾಲಯದ ತೀರ್ಮಾನಕ್ಕೆ ಗೌರವ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಮೂವರು ಸಂಸದರ ಪೈಕಿ ನೀವೂ ಸಹಿ ಮಾಡಿದ್ದೀರಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು ಈಗಾಗಲೇ ಸೋಷಿಯಲ್ ಮೀಡಿಯಾ ಮುಂದೆ ತೆಗೆದುಕೊಂಡು ಹೋಗಿದೆ. ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಪಕ್ಷದ ಒಂದು ನಿಲುವು ಇರುತ್ತದೆ. ಪಾರ್ಟಿಗೆ ಬದ್ಧರಾಗಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಇದು ತುಂಬಾ ಸೂಕ್ಷ್ಮ ವಿಚಾರ. ಪೊಲೀಸ್ ಇಲಾಖೆಯು ಈ ಬಗ್ಗೆ ತನಿಖೆ ನಡೆಸುತ್ತದೆ. ವಾಸ್ತವ ಏನು ಎಂದು ತಿಳಿದುಕೊಂಡು ತಪ್ಪೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
- Davanagere mp news Prabha Mallikarjun News Updates
- Prabha Mallikarjun
- Prabha Mallikarjun Davanagere mp
- Prabha Mallikarjun News
- Prabha Mallikarjun News Updates
- ತಾಯಿ ಆಸೆ ಈಡೇರಿಸಿದ ಪ್ರಭಾ ಮಲ್ಲಿಕಾರ್ಜುನ್
- ಪ್ರಭಾ ಮಲ್ಲಿಕಾರ್ಜುನ್
- ಪ್ರಭಾ ಮಲ್ಲಿಕಾರ್ಜುನ್ - ದಾವಣಗೆರೆ ಸಂಸದೆ
- ಪ್ರಭಾ ಮಲ್ಲಿಕಾರ್ಜುನ್ - ಸಂಸದರು
- ಪ್ರಭಾ ಮಲ್ಲಿಕಾರ್ಜುನ್ ಕಾರ್ಯ
- ಪ್ರಭಾ ಮಲ್ಲಿಕಾರ್ಜುನ್ ನ್ಯೂಸ್
- ಪ್ರಭಾ ಮಲ್ಲಿಕಾರ್ಜುನ್ ಸುದ್ದಿ





Leave a comment