ದಾವಣಗೆರೆ: ದಾದಾಗಿರಿಯೆಲ್ಲಾ ನೋಡಿಬಿಟ್ಟಿದ್ದೇವೆ. ನಾವು ಯಾವುದಕ್ಕೂ ಜಗ್ಗಲ್ಲ ಬಗ್ಗಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
READ ALSO THIS STORY: ಕಾಂಗ್ರೆಸ್ ಗೂಂಡಾ ಅಧ್ಯಕ್ಷ ಎಂದಿದ್ದ ರೇಣುಕಾಚಾರ್ಯ ವಿರುದ್ದ ಎಸ್ಪಿ ಉಮಾ ಪ್ರಶಾಂತ್ ಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ದೂರು!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ಮಣ್ಣು ಸಾಗಾಟ, ಅವ್ಯವಹಾರ, ಭ್ರಷ್ಟಾಚಾರ ವಿರೋಧಿಸಿ ಹಾಗೂ ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ದ ಜಾತಿ ನಿಂದನೆ ಕೇಸ್ ಹಾಕಿದ್ದರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ದೂರು ನೀಡಿದ್ದ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ದಾದಾಗಿರಿ ಇದೇನೂ ಮೊದಲಲ್ಲ. ಈ ಹಿಂದೆಯೂ ನೋಡಿದ್ದೇನೆ. ಯಾವುದಕ್ಕೂ ತಲೆಕೆಡೆಸಿಕೊಳ್ಳುವುದಿಲ್ಲ. ಜಿಲ್ಲಾಡಳಿತದ ಜೊತೆಗೂಡಿ ಶಾಂತಿಯುತವಾಗಿ ಯಾವೆಲ್ಲಾ ಕೆಲಸ ಆಗಬೇಕು ಅದನ್ನು ಒಟ್ಟಾಗಿ ಮಾಡೋಣ. ಅದನ್ನು ಬಿಟ್ಟು ವಿನಾಕಾರಣ ಆರೋಪ ಮಾಡಿದರೆ ಸುಮ್ಮನೆ ಕೂರಲ್ಲ ಎಂದು ಹೇಳಿದರು.
ನಾನು ಸಚಿವನಾಗಿರುವುದು ಇದೇ ಮೊದಲೇನಲ್ಲ. ಮೂರು ಬಾರಿ ಮಂತ್ರಿಯಾಗಿದ್ದೇನೆ. ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಿಜೆಪಿಗರನ್ನು ಹೊಸದಾಗಿ ನೋಡುತ್ತಿಲ್ಲ. ಸಮಾಧಾನದಿಂದ ಇರುವುದನ್ನು ಕಲಿಯಬೇಕು ಎಂದು ಗುಟುರು ಹಾಕಿದರು.




Leave a comment