Home ದಾವಣಗೆರೆ BIG BREAKING: ಭದ್ರಾ ಅಚ್ಚುಕಟ್ಟು ಬೇಸಿಗೆ ಹಂಗಾಮಿಗೆ ಜನವರಿ 8ರಿಂದ ನಾಲೆಗೆ ನೀರು
ದಾವಣಗೆರೆನವದೆಹಲಿಬೆಂಗಳೂರು

BIG BREAKING: ಭದ್ರಾ ಅಚ್ಚುಕಟ್ಟು ಬೇಸಿಗೆ ಹಂಗಾಮಿಗೆ ಜನವರಿ 8ರಿಂದ ನಾಲೆಗೆ ನೀರು

Share
ಭದ್ರಾ
Share

SUDDIKSHANA KANNADA NEWS/DAVANAGERE/DATE:02_01_2026

ದಾವಣಗೆರೆ: ಭದ್ರಾ ಜಲಾಶಯದ ಬೇಸಿಗೆ ಹಂಗಾಮಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಜನವರಿ 8ರಿಂದ ನಾಲೆಗಳಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ.

READ ALSO THIS STORY: ದಾವಣಗೆರೆ ಡ್ರಗ್ಸ್ ಕೇಸಲ್ಲಿ ಕಂಟ್ರ್ಯಾಕ್ಟರ್ ಗಳು, ಎಳನೀರು, ಪ್ಲೈವುಡ್ ವ್ಯಾಪಾರಿ ಬಂಧನ: ಆರೋಪಿಗಳಿಂದ ವಶಪಡಿಸಿಕೊಂಡಿದ್ದೇನು?

ಶಿವಮೊಗ್ಗ ತಾಲೂಕಿನ ಮಲವಗೊಪ್ಪದಲ್ಲಿ ನಡೆಯುತ್ತಿರುವ ಭದ್ರಾ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ಅಚ್ಚುಕಟ್ಟುದಾರರಿಗೆ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದ ನೀರನ್ನು ಹಂಚಿಕೆ ಮಾಡಲು ಶಿವಮೊಗ್ಗ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 88 ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು, ಇದು ಭದ್ರಾ ಅಚ್ಚುಕಟ್ಟು ಪ್ರದೇಶ ಬೆಳೆಗಾರರಿಗೆ ಮಹತ್ವದ ಮಾಹಿತಿಯಾಗಿದೆ.

ರೈತರು ಈಗಾಗಲೇ ಭತ್ತ ಬೆಳೆಯಲು ಸಜ್ಜಾಗಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1 ಲಕ್ಷದ 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸಸಿ ಮಡಿ ಸಿದ್ಧಪಡಿಸಿಕೊಂಡು ಬೀಜ ಚೆಲ್ಲಲು ನೀರು ಬೇಕು. ವಾರ್ಷಿಕ ಬೆಳೆಗಳಾದ ಕಬ್ಬು, ದಾಳಿಂಬೆ ಸೇರಿದಂತೆ ಅಡಿಕೆ, ತೆಂಗು ತೋಟಗಳಿಗೆ ನೀರುಣಿಸಬೇಕು. ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಈ ರೈತರಿಗೆ ಜನವರಿ 8ರಿಂದ ನೀರು ಸಿಗಲಿದೆ.

ಭದ್ರಾ ಡ್ಯಾಂ ನಲ್ಲಿ ನೀರಿನ ಸಂಗ್ರಹ 181 ಅಡಿ ಇದ್ದು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಆದ್ರೂ ಇಂದಿಗೂ ಕಾಲುವೆಗೆ ನೀರು ಹರಿಸಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಡ್ಯಾಂ ನಲ್ಲಿ ಸಾಕಷ್ಟು ನೀರು ಇದ್ದರೂ ಕಾಲುವೆಗಳಲ್ಲಿ ಹರಿಸಿಲ್ಲ ಎಂಬುದು ರೈತರ ಆರೋಪವಾಗಿದೆ.

ದಾವಣಗೆರೆ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ನಾಳೆ ಐ.ಸಿ.ಸಿ ಸಭೆಗೆ ಹಾಜರಾಗಿ, ಜಿಲ್ಲೆಯ ಬೆಳೆ ಪ್ರಮಾಣ, ನೀರಿನ ಅವಶ್ಯಕತೆ ಪ್ರಮಾಣ ಮತ್ತು ನೀರು ಹರಿಸುವ ಅವಧಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಸೂಕ್ತ ಅಂಕಿ ಅಂಶಗಳ ವರದಿ ಮಂಡಿಸಬೇಕು. ಕಾಲುವೆಗಳಲ್ಲಿ ಹರಿಸುವಂತೆ ನಿರ್ಣಯಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡ 70 ರಷ್ಟು ಇರುವುದರಿಂದ ಮುಂದಿನ ಐ.ಸಿ.ಸಿ ಸಭೆ ದಾವಣಗೆರೆಯಲ್ಲಿ ನಡೆಯಬೇಕು ಎಂದು ನಿರ್ಣಯಿಸಬೇಕು ಎಂದು ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಆಗ್ರಹಿಸಿತ್ತು.

Share

Leave a comment

Leave a Reply

Your email address will not be published. Required fields are marked *