SUDDIKSHANA KANNADA NEWS/DAVANAGERE/DATE:21_12_2025
ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟನೆಯ ಡೆವಿಲ್ ಚಿತ್ರದ ಪ್ರಮೋಷನ್ ಗೆ ಅವರ ಪತ್ನಿ ವಿಜಯಲಕ್ಷ್ಮೀ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ದಾವಣಗೆರೆಗೂ ವಿಜಯಲಕ್ಷ್ಮೀ ಅವರು ಪ್ರಚಾರಕ್ಕೆ ಬಂದಿದ್ದರು. ಸಿನಿಮಾ ಪ್ರಮೋಷನ್ ವೇಳೆ ಆಡಿದ ಮಾತುಗಳು ಈಗ ಚರ್ಚೆಗೆ ಕಾರಣವಾಗಿದೆ. ಕಿಚ್ಚ ಸುದೀಪ್ ಅವರನ್ನೇ ಗುರಿಯಾಗಿಸಿಕೊಂಡು ಆಡಿರುವ ಮಾತು ಈಗ ವೈರಲ್ ಆಗುತ್ತಿದೆ.
ಕೆಲವೊಂದು ವ್ಯಕ್ತಿಗಳು ದರ್ಶನ್ ಇಲ್ಲದೇ ಇದ್ದಾಗ ಅವರ ಬಗ್ಗೆ ಹಾಗೂ ಅವರ ಫ್ಯಾನ್ಸ್ ಬಗ್ಗೆ ವೇದಿಕೆಯಲ್ಲಿ ನಿಂತು ಮಾತನಾಡುತ್ತಾರೆ. ಮೀಡಿಯಾದಲ್ಲಿ ಕುಳಿತು ಮಾತನಾಡೋದು ಮಾಡುತ್ತಿದ್ದಾರೆ. ಹೊರಗಡೆ ಮಾತನಾಡುವುದು ಮಾಡುತ್ತಿದ್ದಾರೆ. ಅದೇ ಜನರು ದರ್ಶನ್ ಇದ್ದಾಗ ಬೆಂಗಳೂರಿನಲ್ಲಿ ಇದ್ದಾಗ ಇರುತ್ತಾರೋ ಇಲ್ಲವೋ ಎಂಬುದೇ ಗೊತ್ತಾಗಲ್ಲ ಎಂದು ಸುದೀಪ್ ಹೆಸರು ಪ್ರಸ್ತಾಪಿಸದೇ ಮಾತನಾಡಿದ್ದಾರೆ.
ಯಾರೂ ಸಿಟ್ಟಾಗಬಾರದು. ದರ್ಶನ್ ಅವರು ಹೇಳಿದ ಹಾಗೆ ಏನೇ ಮಾತನಾಡಿದರೂ ಕೋಪ ಮಾಡಿಕೊಳ್ಳಬೇಡಿ, ಬೇಸರ ಆಗಬೇಡಿ. ನಿಮ್ಮ ಪ್ರೀತಿ ಮತ್ತು ಬೆಂಬಲ ಮಾತ್ರ ನಮಗೆ ಬೇಕು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.





Leave a comment