Site icon Kannada News-suddikshana

ದಾವಣಗೆರೆಯಲ್ಲಿ ವಿಜಯದಶಮಿ ಆಚರಣೆಯ ಮೆರವಣಿಗೆ: ತಾತ್ಕಾಲಿಕ ವಾಹನ ಮಾರ್ಗ ಬದಲಾವಣೆ

ದಾವಣಗೆರೆ

SUDDIKSHANA KANNADA NEWS/DAVANAGERE/DATE:29_09_2025

ದಾವಣಗೆರೆ: ದಾವಣಗೆರೆ ನಗರದಲ್ಲಿ ಆಚರಿಸುವ ವಿಜಯದಶಮಿ ಹಬ್ಬದ ಮೆರವಣಿಗೆ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಕೆಳಕಂಡಂತೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

READ ALSO THIS STORY: 33 ಸಾವಿರ ಕೋಟಿ ರೂ. ಬಿಲ್ ಪಾವತಿಗೆ ಡಬಲ್ ಕಮೀಷನ್ ಬೇಡಿಕೆ ಆರೋಪ: ಸಿದ್ದರಾಮಯ್ಯರಿಗೆ ಗುತ್ತಿಗೆದಾರ ಸಂಘ ಬರೆದಿರುವ ಪತ್ರದಲ್ಲೇನಿದೆ?

ಅಕ್ಟೋಬರ್ 2 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕೆಳಕಂಡಂತೆ ಬದಲಾವಣೆ.

ಜಗಳೂರು ಕಡೆಯಿಂದ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಬೇತೂರು ಹಳ್ಳದ ಸಮೀಪ ಇರುವ ರಿಂಗ್ ರಸ್ತೆ ಮೂಲಕ ಟಿಪ್ಪು ಸರ್ಕಲ್ ಮುಖಾಂತರ ಚಲಿಸಿ ನಂತರ ಆಖ್ತರ್ ರಜಾ ಸರ್ಕಲ್, ಆರ್,ಟಿ.ಓ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಳೇ ಪಿ.ಬಿ ರಸ್ತೆ ಮುಖಾಂತರ ಸಂಚರಿಸುವುದು. ಪ್ರಯಾಣಿಕ ವಾಹನಗಳಾದ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಅಲ್ಲಿಂದಲೇ ವಾಪಾಸ್ ಹೊರಡುವುದು. ಹಾಗೂ ಆ ದಿನ ಕೆ.ಆರ್.ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಶೋಭಾಯಾತ್ರೆ ಮೆರವಣಿಗೆ ಮುಗಿಯುವರೆಗೂ ಯಾವುದೇ ಬಸ್ ಗಳು ಕಾರ್ಯ ನಿರ್ವಹಿಸುವಂತಿಲ್ಲ.

ಹರಪನಹಳ್ಳಿ ಕಡೆಯಿಂದ ಕಂಚಿಕೆರೆ ಮಾಗಾನಹಳ್ಳಿ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕ ವಾಹನಗಳು ಮಾಗಾನಹಳ್ಳಿ ರಸ್ತೆಯ ಹಳ್ಳದ ಹತ್ತಿರ ಇರುವ ಚೌಡಮ್ಮ ದೇವಸ್ಥಾನ ಕ್ರಾಸ್ ನಿಂದ ಬೂದಾಳ್ ರಸ್ತೆ ಕಡೆಗೆ ಚಲಿಸಿ ನಂತರ ಆರ್.ಟಿ.ಓ ಸರ್ಕಲ್ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಳೇ ಪಿ.ಬಿ ರಸ್ತೆಯಲ್ಲಿ ಸಂಚರಿಸುವುದು. ಅದೇ ರೀತಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳು ಟಿಪ್ಪು ಸರ್ಕಲ್ ನಿಂದ ರಿಂಗ್ ರಸ್ತೆ ಮೂಲಕ ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ಇಲ್ಲಿಂದಲೇ ವಾಪಾಸ್ ಹೊರಡುವುದು.

ಮಾಗಾನಹಳ್ಳಿ ರಸ್ತೆಯ ಟಿಪ್ಪು ಸರ್ಕಲ್ ಕಡೆಯಿಂದ ಅರಳೀಮರ ಸರ್ಕಲ್ ನಂತರ ಕೆ.ಆರ್. ರಸ್ತೆ ಮುಖಾಂತರ ಅಶೋಕ ಎಲ್.ಸಿ ಗೇಟ್ ಕಡೆಗೆ ಹಾಗೂ ಅಶೋಕ ಎಲ್.ಸಿ ಗೇಟ್ ಕಡೆಯಿಂದ ಅರಳೀಮರ ಸರ್ಕಲ್ ನಂತರ ಟಿಪ್ಪು ಸರ್ಕಲ್ ಹಾಗೂ ವೆಂಕಟೇಶ್ವರ ಸರ್ಕಲ್ ಕಡೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 04.00 ಗಂಟೆಯವರಿಗೆ ಯಾವುದೇ ಭಾರಿ ಹಾಗೂ ಲಘು ಸರಕು ಹಾಗೂ ಪ್ರಯಾಣಿಕ ವಾಹನಗಳು ಸಂಚರಿಸದಂತೆ ನಿಷೇಧ ಮಾಡಿದೆ.

ಅಗ್ನಿ ಶಾಮಕಠಾಣೆ ಪ್ಲೈ ಓವರ್ ಕಡೆಯಿಂದ ಎ.ಪಿ.ಎಂ.ಸಿ ಲಿಂಕ್ ರಸ್ತೆ ಮೂಲಕ ವೆಂಕಟೇಶ್ವರ ಸರ್ಕಲ್ ಕಡೆಗೆ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಪ್ರಯಾಣಿಕ ವಾಹನಗಳು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 04.00 ಗಂಟೆಯವರಿಗೆ ಮಟ್ಟಿಕಲ್ ಮುಖಾಂತರ ವೆಂಕಟೇಶ್ವರ ಸರ್ಕಲ್ ಕಡೆಗೆ ಬಾರದೇ ಖಾಸಗಿ ಬಸ್ಸುಗಳು ಹಳೇ ಪಿ.ಬಿ ರಸ್ತೆಯಲ್ಲಿ ಬರುವ ಖಾಸಗಿ ಬಸ್ ನಿಲ್ದಾಣದಿಂದ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಡಿ.ಸಿಎಂ ಅಂಡರ್ ಬ್ರಿಡ್ಜ್ ಮೂಲಕ ಆವರಗೆರೆ ಮಾರ್ಗವಾಗಿ ಬಾಡಾ ಕ್ರಾಸ್ ಮೂಲಕ ಎನ್.ಹೆಚ್ ರಸ್ತೆಯಲ್ಲಿ ಸಂಚರಿಸುವುದು.

ವೆಂಕಟೇಶ್ವರ ಸರ್ಕಲ್ ನಿಂದ ಎ.ಪಿ.ಎಂ.ಸಿ ಪ್ಲೈ ಓವರ್ ವರೆಗೆ ವೆಂಕಟೇಶ್ವರ ಸರ್ಕಲ್ ನಿಂದ ಅರಳೀಮರ ಸರ್ಕಲ್ ವರೆಗೆ ಕೆ.ಆರ್ ರಸ್ತೆ ಗಣೇಶ ಗುಡಿ ಕ್ರಾಸ್ ನಿಂದ ಹಾಸಬಾವಿ ಸರ್ಕಲ್ ವರೆಗೆ , ಹಾಸಬಾವಿ ಸರ್ಕಲ್ ನಿಂದ ಗ್ಯಾಸ್ ಕಟ್ಟೆ ಸರ್ಕಲ್ ವರೆಗೆ, ಗ್ಯಾಸ್ ಕಟ್ಟೆ ಸರ್ಕಲ್ ನಿಂದ ಕಾಳಿಕದೇವಿ ರಸ್ತೆಯವರಿಗೆ , ಕಾಳಿಕದೇವಿ ರಸ್ತೆಯಿಂದ ಹಗೇದಿಬ್ಬ ಸರ್ಕಲ್ ಮಾರ್ಗವಾಗಿ ದುರ್ಗಾಂಬಿಕಾ ದೇವಸ್ಥಾನದವರೆಗೆ, ದುರ್ಗಾಂಬಿಕಾ ದೇವಸ್ಥಾನದಿಂದ ಹೊಂಡದ ಸರ್ಕಲ್ ಮಾರ್ಗವಾಗಿ ಅರುಣ ಎಲ್.ಸಿ ಗೇಟ್ ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ವಾಹನಗಳು ಸಂಚರಿಸದಂತೆ ಹಾಗೂ ಯಾವುದೇ ರೀತಿಯ ವಾಹನಗಳು ನಿಲುಗಡೆಯಾಗದಂತೆ ನಿಷೇಧಿಸಿದೆ.

ದಿನಾಂಕ: 02.10.2025 ರಂದು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 9.00 ಗಂಟೆಯವರಿಗೆ ಮಾತ್ರ ಈ ಕೆಳಕಂಡಂತೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಹರಿಹರ ಕಡೆಯಿಂದ ಬಾತಿ ಮೂಲಕ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಬರುವ ಎಲ್ಲಾ ಭಾರಿ ವಾಹನಗಳು ಅಂದರೆ ಸರಕು ಲಾರಿಗಳು, ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‍ಗಳು ಹರಿಹರ ನಗರದಿಂದ ದಾವಣಗೆರೆ ಕಡೆಗೆ ಬರುವ ಹಳೇ ಪಿ.ಬಿ ರಸ್ತೆಗೆ ಬಾರದೇ ಹರಿಹರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್.ಹೆಚ್-48 ರಸ್ತೆ ಮೂಲಕ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆ.ಎಸ್.ಆರ್.ಟಿ.ಸಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಹಳೇ ಪಿ.ಬಿ. ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ, ಹತ್ತಿಸಿಕೊಂಡು ವಾಪಾಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.

ಚಿತ್ರದುರ್ಗದ ಕಡೆಯಿಂದ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕ ವಾಹನಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ಲಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ಖಾಸಗಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ, ಹತ್ತಿಸಿಕೊಂಡು ವಾಪಾಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.

ಹಳೇ ಪಿ.ಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಎಂ.ಜಿ.ಸರ್ಕಲ್ ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ಸರಕು ಸಾಗಾಣಿಕ ವಾಹನಗಳು ಮತ್ತು ಭಾರಿ ಮತ್ತು ಲಘು ಪ್ರಯಾಣಿಕರ ವಾಹನಗಳು ಸಂಚರಿಸದಂತೆ ನಿಷೇಧಿಸಿದೆ.

Exit mobile version