Site icon Kannada News-suddikshana

ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಪ್ರಕರಣ: ಕೋರ್ಟ್‌ ನಲ್ಲಿ ಇಂದು ಅರ್ಜಿ ವಿಚಾರಣೆ

ಬೆಂಗಳೂರು : ಸ್ಯಾಂಡಲ್‌ ವುಡ್‌ ನಲ್ಲಿ ಇದೀಗ ಮತ್ತೊಂದು ವಿಚ್ಛೇದನ ಪ್ರಕರಣ ಬೆಳಕಿಗೆ ಬಂದಿದ್ದು, ನಟ ದುನಿಯಾ ವಿಜಯ್‌ ಅವರು ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. 

ನಟ ದುನಿಯಾ ವಿಜಯ್‌ ಅವರು ತಮ್ಮ ಪತ್ನಿ ನಾಗರತ್ನಗೆ ವಿಚ್ಛೇದನ ನೀಡುವ ಕುರಿತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಶಾಂತಿನಗರದ ಕೋರ್ಟ್‌ ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ. ನಟ ದುನಿಯಾ ವಿಜಯ್‌ ಅವರು  2018 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

 

Exit mobile version