Site icon Kannada News-suddikshana

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೇಸಿಗೆ ಬಿಸಿಲು ಹಾಗೂ ಮುಂಗಾರು ಪೂರ್ವ ಮಳೆಯಿಂದಾಗಿ ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಹಣ್ಣು ತರಕಾರಿಗಳ ಬೆಲೆ ಹೆಚ್ಚಾಗುತ್ತಿದ್ದು, ಸೌತೆ ಕಾಯಿ, ನಿಂಬೆ ಹಣ್ಣು ಸೇರಿದಂತೆ ಅಗತ್ಯ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಬೀನ್ಸ್ ಕೆಜಿಗೆ 250 ರೂ. ಇದ್ದರೆ ಮೂಲಂಗಿ 35 ರೂ, ಹಾಗಲಕಾಯಿ 60 ರೂ, ಈರುಳ್ಳಿ 40 ರೂ. ಬೆಂಡೆಕಾಯಿ 30 ರೂ. ಮೆಣಸಿನಕಾಯಿ 60 ರೂ, ನುಗ್ಗೆಕಾಯಿ 80 ರೂ.ಗೆ ಮಾರಟವಾಗುತ್ತಿದೆ. ನವಿಲುಕೋಸು – 80 ರೂ, ಹೀರೆಕಾಯಿ – 80 ರೂ, ಈರುಳ್ಳಿ – 40 ರೂ, ಬೀಟ್ರೂಟ್‌- 80 ರೂ, ಬೆಂಡೆಕಾಯಿ – 80 ರೂ, ಟೊಮೇಟೋ – 40 ರೂ, ಆಲೂಗೆಡ್ಡೆ- 50 ರೂ, ಣಸಿನಕಾಯಿ- 90 ರೂ, ಕ್ಯಾಪ್ಸಿಕಂ- 90 ರೂ ಗೆ ಮಾರಾಟವಾಗುತ್ತಿದೆ

Exit mobile version