Site icon Kannada News-suddikshana

ಇಷ್ಟು ಸುಲಭದ ವೆಜ್ ಬಿರಿಯಾನಿ ನೀವು ಯಾವತ್ತೂ ಮಾಡಿರಲ್ಲ ; ಒಮ್ಮೆ ಟ್ರೈ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು…

ಎಣ್ಣೆ- ಸ್ವಲ್ಪ
ಕಾಳುಮೆಣಸು- ಸ್ವಲ್ಪ
ಚಕ್ಕೆ, ಲವಂಗ-ಸ್ವಲ್ಪ
ಈರುಳ್ಳಿ- 1
ಬೆಳ್ಳುಳ್ಳಿ-ಸ್ವಲ್ಪ
ಶುಂಠಿ-ಸ್ವಲ್ಪ
ಕೊತ್ತಂಬರಿ-ಸ್ವಲ್ಪ
ಪುದೀನಾ-ಸ್ವಲ್ಪ
ಹಸಿಮೆಣಸಿನ ಕಾಯಿ- 4
ಕ್ಯಾರೆಟ್- 2 (ಸಣ್ಣಗೆ ಕತ್ತರಿಸಿಕೊಂಡಿದ್ದು)
ಬೀನ್ಸ್- ಸ್ವಲ್ಪ (ಸಣ್ಣಗೆ ಕತ್ತರಿಸಿಕೊಂಡಿದ್ದು)
ಬಟಾಣಿ ಅಥವಾ ಅವರೆಕಾಳು- ಸ್ವಲ್ಪ
ಅಕ್ಕಿ- 1 ಬಟ್ಟಲು
ಪಲಾವ್ ಎಲೆ- ಸ್ವಲ್ಪ
ಏಲಕ್ಕಿ- 2
ಸೋಂಪು-ಸ್ವಲ್ಪ
ಕಸೂರಿಮೇಥಿ-ಸ್ವಲ್ಪ
ಜೀರಿಗೆ- ಅರ್ಧ ಚಮಚ
ತುಪ್ಪ- 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಅಚ್ಚಖಾರದ ಪುಡಿ- ಕಾಲು ಚಮಚ
ಬಿರಿಯಾನಿ ಮಾಸಾಲಾ ಪುಡಿ- ಒಂದು ಚಮಚ
ಮೊಸರು- 3 ಚಮಚ
ಅರಿಶಿಣದ ಪುಡಿ- ಅರ್ಧ ಚಮಚ

ಮಾಡುವ ವಿಧಾನ…

ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಕಾಳುಮೆಣಸು, ಚಕ್ಕೆ, ಲವಂಗ, ಈರುಳ್ಳಿ (ಅರ್ಧ), ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ, ಪುದೀನಾ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಇದನ್ನು ಮಿಕ್ಸಿ ಜಾರ್’ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
ಇದೀಗ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ತುಪ್ಪ ಹಾಕಿ. ಕಾದ ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಕಸೂರಿಮೇಥಿ, ಜೀರಿಗೆ ಹಾಕಿ. ನಂತರ ಕತ್ತರಿಸಿಕೊಂಡ ಈರುಳ್ಳಿಯನ್ನು ಹಾಕಿ. ಕೆಂಪಗಾದ ಬಳಿಕ ತರಕಾರಿಗಳನ್ನು ಹಾಕಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ, ಬಿರಿಯಾನಿ ಮಾಸಾಲಾ ಪುಡಿ, ಮೊಸರು. ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಕುದಿಯುತ್ತಿದ್ದಂತೆಯೇ ಅಕ್ಕಿ ಹಾಗೂ ಅಳತೆಗೆ ತಕ್ಕಷ್ಟು ನೀರು ಹಾಕಿ 1-2 ಕೂಗು ಕೂಗಿಸಿಕೊಂಡರೆ ರುಚಿಕರವಾದ ವೆಜ್ ಬಿರಿಯಾನಿ ಸವಿಯಲು ಸಿದ್ಧ.

Exit mobile version