SUDDIKSHANA KANNADA NEWS/DAVANAGERE/DATE:08_12_2025
ನವದೆಹಲಿ: ಬ್ರಿಟಿಷರು ಬಂಗಾಳದಿಂದ ರಾಷ್ಟ್ರವನ್ನು ವಿಭಜಿಸಲು ಪ್ರಾರಂಭಿಸಿದ್ದರು. ಆದ್ರೆ, ವಂದೇ ಮಾತರಂ ನಮ್ಮ ಏಕತೆಗೆ ಪ್ರೇರಣೆ ನೀಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ ನಲ್ಲಿ ಮಾತನಾಡಿದ ಅವರು, ಬ್ರಿಟೀಷರು ದೇಶ ವಿಭಜನೆಗೆ ಷಡ್ಯಂತ್ರವನ್ನೇ ರೂಪಿಸಿದ್ದರು. ಆದ್ರೆ, ವಂದೇ ಮಾತರಂ ಗೀತೆ ನಮಗೆಲ್ಲಾ ಪ್ರೇರಣೆ ನೀಡಿತು ಎಂದು ಬಣ್ಣಿಸಿದರು.
ವಂದೇ ಮಾತರಂ ಒಂದು ಪವಿತ್ರ ಯುದ್ಧ ಘೋಷಣೆಯಾಗಿತ್ತು ಎಂದು ಪ್ರಧಾನಿ ಸಂಸತ್ತಿನಲ್ಲಿ ಹೇಳಿದರು.
“ವಂದೇ ಮಾತರಂ ಕೇವಲ ರಾಜಕೀಯ ಸ್ವಾತಂತ್ರ್ಯದ ಮಂತ್ರವಾಗಿರಲಿಲ್ಲ. ಭಾರತ ಮಾತೆಯನ್ನು ವಸಾಹತುಶಾಹಿಯ ಕುರುಹುಗಳಿಂದ ಮುಕ್ತಗೊಳಿಸಲು ಇದು ಪವಿತ್ರ ಯುದ್ಧ ಘೋಷಣೆಯಾಗಿತ್ತು” ಎಂದು ಪ್ರಧಾನಿ ಹೇಳಿದರು.
“ವಂದೇ ಮಾತರಂ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಂತ್ರವಲ್ಲ. ಭಾರತ ಮಾತೆಯನ್ನು ವಸಾಹತುಶಾಹಿಯ ಕುರುಹುಗಳಿಂದ ಮುಕ್ತಗೊಳಿಸಲು ಇದು ಪವಿತ್ರ ಯುದ್ಧ ಘೋಷಣೆಯಾಗಿತ್ತು” ಎಂದು ತಿಳಿಸಿದರು.





Leave a comment