ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಈ ಘೋಷಣೆ ಆಗುತ್ತಿದ್ದಂತೆ ಮಠದ ಬಳಿ ಭಕ್ತರ ದಂಡೇ ಆಗಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
ಶ್ವಾಸಪೀಠದಲ್ಲಿದ್ದ ವಚನಾನಂದ ಸ್ವಾಮೀಜಿ ಅವರಿಗೆ ತ್ಯಜಿಸುವಂತೆ ಪಂಚಮಸಾಲಿ ಸಮಾಜದ ಟ್ರಸ್ಟ್ ಸಮಿತಿ ಸೂಚನೆ ಕೊಟ್ಟಿತ್ತು. ಇದಕ್ಕೆ ಕ್ಯಾರೇ ಎನ್ನದ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು
ಮಠದ ಟ್ರಸ್ಟಿ ಜಿ. ಪಿ. ಪಾಟೀಲ್ ತಿಳಿಸಿದ್ದಾರೆ.
ಉಚ್ಚಾಟನೆ ವಿಚಾರ ಗೊತ್ತಾಗುತ್ತಿದ್ದಂತೆ ರೊಚ್ಚಿಗೆದ್ದ ವಚನಾನಂದ ಸ್ವಾಮೀಜಿ ಮಠದಿಂದ ಹೊರಗೆ ಬಂದರು. ಈ ವೇಳೆ ಸ್ವಾಮೀಜಿ ಪರ ಮತ್ತು ವಿರೋಧ ಇದ್ದವರು ಇದ್ದರು. ಆಗ ಪೊಲೀಸರ ಜೊತೆ ಸ್ವಾಮೀಜಿ ವಾಗ್ವಾದ ನಡೆಸಿದರು.
ಹದಿನೈದು ಮಂದಿ ಇದ್ದ ಟ್ರಸ್ಟ್ ಸಮಿತಿಯ ಟ್ರಸ್ಚಿಗಳ ಪೈಕಿ 12 ಮಂದಿ ಪಾಲ್ಗೊಂಡಿದ್ದರು. 12 ಮಂದಿಯೂ ಸಭೆ ನಡೆಸಿ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಪದಚ್ಯುತಿಗೊಳಿಸುವ ನಿರ್ಣಯ ಘೋಷಿಸಿದರು. ಈ ವೇಳೆ ಮಠದ
ಆವರಣದಲ್ಲಿ ಹೈಡ್ರಾಮಾವೇ ನಡೆಯಿತು. ಶ್ರೀಗಳ ಪರ ಪ್ರತಿಭಟನೆ ನಡೆಸಿದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಂಧಿಸಿದರು. ಪೊಲೀಸರು ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು
ಹಾಗೂ ಭಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.





Leave a comment